ಲಾರಿಗೆ ಸ್ಕೂಟರ್ ಢಿಕ್ಕಿ: ದಂಪತಿ ಮೃತ್ಯು

Update: 2019-04-19 14:25 GMT

ಬೆಂಗಳೂರು, ಎ.19: ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಪತಿ-ಪತ್ನಿ ಇಬ್ಬರು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆರ್‌ಟಿ ನಗರದ ಸಿಂಬರಸನ್ (29) ಹಾಗೂ ಅವರ ಪತ್ನಿ ಪುಪ್ಪಾ (24) ಮೃತಪಟ್ಟವರು ಎಂದು ತಿಳಿದುಬಂದಿದೆ.

ಟೆಂಪೋ ಚಾಲಕರಾಗಿದ್ದ ಸಿಂಬರಸನ್, ಗುರುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಸ್ವಂತ ಊರಾದ ಧರ್ಮಪುರಿಗೆ ಪತ್ನಿಯೊಂದಿಗೆ ಹೋಗಿದ್ದರು. ಅಲ್ಲಿಂದ ಗುರುವಾರ ರಾತ್ರಿ 8:45ರ ವೇಳೆ ಸ್ಕೂಟರ್‌ನಲ್ಲಿ ಆರ್‌ಟಿ ನಗರದ ಮನೆಗೆ ಬರುತ್ತಿದ್ದ ಮಾರ್ಗ ಮಧ್ಯೆ ವೀರಸಂದ್ರ ಟೋಲ್ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಸಿಂಬರಸನ್ ಹಾಗೂ ಹಿಂದೆ ಕುಳಿತಿದ್ದ ಪುಪ್ಪಾ ಗಂಭೀರವಾಗಿ ಗಾಯಗೊಂಡಿದ್ದಾರೆ. ತಲೆಗೆ ಪೆಟ್ಟಾಗಿದ್ದ ಸಿಂಬರಸನ್ ಅವರನ್ನು ನಿಮ್ಹಾನ್ಸ್‌ಗೆ ಹಾಗೂ ಪುಪ್ಪಾಅವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News