ಡಿಕೆಶಿ ಮನೆ ಮೇಲೆ ಐಟಿ ದಾಳಿ ಪ್ರಕರಣ: ಆರ್ಥಿಕ ವರ್ಷ ಮುಗಿಯುವ ಮುನ್ನವೇ ಐಟಿ ದಾಳಿ ನಡೆದಿದೆ-ಕೋರ್ಟ್‌ಗೆ ಹೇಳಿಕೆ

Update: 2019-04-29 16:23 GMT

ಬೆಂಗಳೂರು, ಎ.29: ಐಟಿ ದಾಳಿ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಮುಕ್ತಗೊಳಿಸಲು ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಎ.30ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಐಟಿ ಇಲಾಖೆ ದಾಖಲು ಮಾಡಿರುವ ದೂರಿನಲ್ಲಿ ಯಾವುದೆ ಹುರುಳಿಲ್ಲ. ಐಟಿ ಕಾಯ್ದೆ 276(ಸಿ) ಹಾಗೂ 277 ಸೆಕ್ಷನ್ ಅಡಿ ಪ್ರಕರಣವನ್ನೂ ದಾಖಲು ಮಾಡಲು ಬರುವುದಿಲ್ಲ. ಹೀಗಾಗಿ, ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ಆರ್ಥಿಕ ವರ್ಷ ಮುಗಿಯುವ ಮುನ್ನವೆ ಡಿಕೆಶಿ ಅವರ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಅಲ್ಲದೆ, ಐಟಿ ಉಪ ನಿರ್ದೇಶಕರು ಸಲ್ಲಿಸಿರುವ ದೂರು ಕೂಡ ಕಾನೂನು ಬಾಹಿರವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾಣೆಯನ್ನು ಎ.30ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News