ಮೋದಿ ಅಡ್ಡಹೆಸರು ಕುರಿತ ಹೇಳಿಕೆಗಾಗಿ ರಾಹುಲ್‌ಗೆ ಸೂರತ್ ಕೋರ್ಟ್ ಸಮನ್ಸ್

Update: 2019-05-02 14:33 GMT

ಸೂರತ್(ಗುಜರಾತ್),ಮೇ 2: ಮೋದಿ ಅಡ್ಡಹೆಸರಿನ ಕುರಿತು ಹೇಳಿಕೆಗಾಗಿ ಗುಜರಾತಿನ ಬಿಜೆಪಿ ಶಾಸಕ ಪೂರ್ಣೇಶ ಮೋದಿ ಅವರು ಹೂಡಿರುವ ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ನ್ಯಾಯಾಲಯವು ಗುರುವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಸಮನ್ಸ್ ಹೊರಡಿಸಿದೆ.

ಜೂ.7ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ರಾಹುಲ್‌ಗೆ ಸೂಚಿಸಲಾಗಿದೆ.

‘ಮೋದಿಗಳೆಲ್ಲ ಕಳ್ಳರು’ ಎಂದು ಹೇಳುವ ಮೂಲಕ ರಾಹುಲ್ ಇಡೀ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಸೂರತ್(ಪಶ್ಚಿಮ) ಶಾಸಕರಾಗಿರುವ ಪೂರ್ಣೇಶ ಮೋದಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಎ.13ರಂದು ಕರ್ನಾಟಕದ ಕೋಲಾರದಲ್ಲಿ ನಡೆದಿದ್ದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಅವರು,ನೀರವ್ ಮೋದಿ,ಲಲಿತ್ ಮೋದಿ,ನರೇಂದ್ರ ಮೋದಿ....ಇವರೆಲ್ಲ ಮೋದಿ ಅಡ್ಡಹೆಸರನ್ನೇ ಹೊಂದಿರುವುದು ಹೇಗೆ? ಎಲ್ಲ ಕಳ್ಳರೂ ಮೋದಿ ಎಂಬ ಸಾಮಾನ್ಯ ಅಡ್ಡಹೆಸರನ್ನೇ ಹೊಂದಿದ್ದು ಹೇಗೆ ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News