ಮೇ 4: ಬೆಂಗಳೂರು ಜಲಮಂಡಳಿ ಫೋನ್- ಇನ್ ಕಾರ್ಯಕ್ರಮ

Update: 2019-05-02 17:36 GMT

ಬೆಂಗಳೂರು, ಮೇ.2: ಬೆಂಗಳೂರು ಜಲಮಂಡಳಿಯು ಮೇ 4ರಂದು ಬೆಳಗ್ಗೆ 9ರಿಂದ 10.30 ರವರೆಗೆ ಮಂಡಳಿಯ ಅಧ್ಯಕ್ಷರೊಂದಿಗೆ ನೇರ ಫೋನ್- ಇನ್ ಕಾರ್ಯಕ್ರಮವನ್ನು ಆಯೋಜಿಸಿದೆ.

ಸಾರ್ವಜನಿಕರು ತಮ್ಮ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ ಅಥವಾ ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಕುಂದು-ಕೊರತೆಗಳನ್ನು ಬಗೆಹರಿಸಿಕೊಳ್ಳಲು ಕೋರಲಾಗಿದ್ದು, ಸಾರ್ವಜನಿಕರು ದೂ.ಸಂ: 080-2294 5119 ಅನ್ನು ಸಂಪರ್ಕಿಸಬೇಕೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News