ಪಾಕ್ ಪ್ರಧಾನಿಯನ್ನು ಅಪ್ಪಿಕೊಳ್ಳಿ ಎಂದ ರಾಜೀವ್ ಚಂದ್ರಶೇಖರ್ ಗೆ ಸಿದ್ದರಾಮಯ್ಯ ಕುಟುಕಿದ್ದು ಹೀಗೆ..

Update: 2019-05-05 10:33 GMT

ಬೆಂಗಳೂರು, ಮೇ 5: ಪಾಕ್ ಪ್ರಧಾನಿ ಇಮ್ರಾನ್ ಖಾನ್ ರನ್ನು ಅಪ್ಪಿಕೊಳ್ಳಿ ಎಂದು ಕಾಲೆಳೆಯಲು ಮುಂದಾದ ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನು ನೆನಪಿಸುವ ಮೂಲಕ ತಿರುಗೇಟು ನೀಡಿದ್ದಾರೆ.

“ಇಂದು ಮೇ 4, ಟಿಪ್ಪು ಸುಲ್ತಾನ್ ಕೊನೆಯುಸಿರೆಳೆದ ದಿನ. ಗುಲಾಮಗಿರಿಯ ಜೀವನವನ್ನು ಬದುಕುವುದಕ್ಕಿಂತ ಸ್ವಾತಂತ್ರ್ಯವನ್ನು ಬಯಸಿ ಅದಕ್ಕಾಗಿ ಹೋರಾಡುತ್ತಾ ಸಾವನ್ನಪ್ಪಿದ್ದಕ್ಕಾಗಿ ನಾನು ಅವರನ್ನು ಮೆಚ್ಚುತ್ತೇನೆ” ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದರು.

ಇದನ್ನು ರಿಟ್ವೀಟ್ ಮಾಡಿದ್ದ ರಾಜೀವ್ ಚಂದ್ರಶೇಖರ್ , “ಪ್ರೀತಿಯ ಸಿದ್ದರಾಮಯ್ಯ ಅವರೇ- ಸಿಧುವಂತೆ ಇಮ್ರಾನ್ ರನ್ನು ಅಪ್ಪಿಕೊಳ್ಳಲು ನಿಮಗಿದು ಸರಿಯಾದ ಸಮಯ!, ಇದು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಫೇವರಿಟ್ ಆಗಲು ಸುಲಭದ ದಾರಿ” ಎಂದಿದ್ದರು.

ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಮಿ. ರಾಜೀವ್, ಟ್ವೀಟ್ ಮಾಡುವ ಮೊದಲು ಯೋಚಿಸಿ. ನಮ್ಮ ಶತ್ರು ದೇಶದ ಪ್ರಧಾನಿ ಜೊತೆ ಕುಳಿತು ಬಿರಿಯಾನಿ ತಿನ್ನಲು ನಾನು ನಿಮ್ಮ ಚೋರ್ ನರೇಂದ್ರ ಮೋದಿಯಲ್ಲ ಮತ್ತು ನಿಮ್ಮ ಬಾಸ್ ಗಳನ್ನು ಸಂತಸಪಡಿಸಲು ನೈತಿಕತೆಯ ಜೊತೆ ರಾಜಿ ಮಾಡಿಕೊಳ್ಳಲು ನಿಮ್ಮಂತೆಯೂ ಅಲ್ಲ. ನಿಮ್ಮ ಬಾಸ್ ಗಳ ಗುಲಾಮನಂತೆ ನಿಮ್ಮ ಹಾಗೆ ಬದುಕುವುದಕ್ಕಿಂತ ಟಿಪ್ಪು ಸುಲ್ತಾನನಂತೆ ಬದುಕುವುದು ಒಳ್ಳೆಯದು” ಎಂದಿದ್ದಾರೆ.

ಸಿದ್ದರಾಮಯ್ಯರ ಈ ಟ್ವೀಟ್ ಟ್ವಿಟರಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News