ರಮೇಶ್ ಜಾರಕಿಹೊಳಿಯನ್ನು ನಿರ್ಲಕ್ಷಿಸಿದ್ದು ತಪ್ಪು: ಬಸವರಾಜ ಹೊರಟ್ಟಿ

Update: 2019-05-07 16:35 GMT

ಹುಬ್ಬಳ್ಳಿ, ಮೇ 7: ಉತ್ತರ ಕರ್ನಾಟಕ ಭಾಗದ ಪ್ರಭಾವಿ ಮುಖಂಡ ರಮೇಶ್ ಜಾರಕಿಹೊಳಿಯನ್ನು ನಿರ್ಲಕ್ಷಿಸಿದ್ದು ಹಾಗೂ ಮಂತ್ರಿ ಸ್ಥಾನದಿಂದ ತೆಗೆದಿದ್ದು ತಪ್ಪು ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಮಂಗಳವಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಯಕರು ಮಾಡುವ ಹಲವು ತಪ್ಪುಗಳ ಪರಿಣಾಮವಾಗಿ ಸರಕಾರದ ಭದ್ರತೆಗೆ ಕಂಟಕವಾಗಿದೆ. ರಮೇಶ್ ಜಾರಕಿಹೊಳಿಯಿಂದ ಸಚಿವ ಸ್ಥಾನವನ್ನು ವಾಪಸ್ ಪಡೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಎಲ್ಲ ಸಂದರ್ಭದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ. ಜನತೆ ಕೇವಲ ಜಾತಿ ನೋಡಿ ಮತ ಹಾಕುವುದಿಲ್ಲ. ಹೀಗಾಗಿ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಮತದಾರರನ್ನು ಸೆಳೆಯಬಹುದು. ಹೀಗಾಗಿ ಮತದಾರರು ಅಂತಿಮವಾಗಿ ಯಾರ ಪರ ಒಲವು ತೋರುತ್ತಾರೆ ಎನ್ನುವುದು ಫಲಿತಾಂಶದ ನಂತರವಷ್ಟೆ ತಿಳಿಯಲಿದೆ ಎಂದು ಅವರು ಹೇಳಿದರು.

ಟ್ಯಾಗೂರ್ ಸ್ಮಾರಕ: ಮೈಸೂರು ದಸರ ಮಹೋತ್ಸವಕ್ಕೆ ಪಾಲ್ಗೊಳ್ಳುವ ಸಲುವಾಗಿ ಮಹಾರಾಜರ ಆಹ್ವಾನದ ಮೇರೆಗೆ 1922ರಲ್ಲಿ ರೈಲಿನಲ್ಲಿ ತೆರಳುತ್ತಿದ್ದ ರವೀಂದ್ರನಾಥ ಟ್ಯಾಗೂರ್ ಧಾರವಾಡ ನಿಲ್ದಾಣದಲ್ಲಿ ಇಳಿದು ಸ್ವಲ್ಪ ಹೊತ್ತು ವಿರಮಿಸಿದರು. ಹೀಗಾಗಿ ಈ ಸ್ಥಳವನ್ನು ಸ್ಮಾರಕವನ್ನಾಗಿ ಮಾಡಬೇಕೆಂದು ಪುರಸ್ಕಾರ ಸೇವಾ ಸಂಸ್ಥೆ ಸರಕಾರವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News