ಕೇಂದ್ರ ಸಚಿವ ಗಿರಿರಾಜ್‌ಗೆ ಚುನಾವಣಾ ಆಯೋಗ ಛೀಮಾರಿ

Update: 2019-05-13 03:42 GMT

ಹೊಸದಿಲ್ಲಿ, ಮೇ 13: ಬಿಹಾರದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಆಯೋಗವು ರವಿವಾರ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರಿಗೆ ಛೀಮಾರಿ ಹಾಕಿದೆ.

ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಆಯೋಗ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಮಾತಿನ ಮೇಲೆ ಎಚ್ಚರ ವಹಿಸಿ ಎಂದು ತಾಕೀತು ಮಾಡಿದೆ.

ಸಿಂಗ್ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಧರ್ಮವನ್ನು ಬಳಸಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದ್ದಾಗಿ ಆಯೋಗ ಹೇಳಿದೆ.

ಎಪ್ರಿಲ್ 24ರಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡಾ ಇದ್ದ ರ್ಯಾಲಿಯಲ್ಲಿ ಮಾತನಾಡಿದ ಸಿಂಗ್ ಅವರ ಹೇಳಿಕೆ ವಿರುದ್ಧ ಮರುದಿನ ಬೆಗುಸರಾಯ್ ಜಿಲ್ಲಾಡಳಿತ ನೀತಿಸಂಹಿತೆ ಉಲ್ಲಂಘನೆ ಆರೋಪ ಮಾಡಿ ವರದಿ ನೀಡಿತ್ತು. "ವಂದೇಮಾತರಂ ಹೇಳದವರು ಅಥವಾ ಮಾತೃಭೂಮಿಯನ್ನು ಗೌರವಿಸದವರನ್ನು ದೇಶ ಎಂದೂ ಕ್ಷಮಿಸುವುದಿಲ್ಲ. ನನ್ನ ಪೂರ್ವಜನರು ಸಿಮಾರಿಯಾ ಘಾಟ್‌ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ ಸಮಾಧಿ ಬೇಕಿಲ್ಲ. ಆದರೆ ನಿಮಗೆ ಮೂರು ಅಂಗುಲ ಜಾಗ ಬೇಕು" ಎಂದು ಸಿಂಗ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News