ಲಂಕಾದಲ್ಲಿ ಹಿಂಸಾಚಾರಕ್ಕೆ ಓರ್ವ ಬಲಿ

Update: 2019-05-14 05:31 GMT

ಕೊಲಂಬೊ, ಮೇ 14: ಶ್ರೀಲಂಕಾ ದೇಶಾದ್ಯಂತ ಕರ್ಫ್ಯೂ ಜಾರಿ ಮಾಡಲಾಗಿದ್ದರೂ, ಮೂರು ಜಿಲ್ಲೆಗಳಲ್ಲಿ   ಕೋಮು ಹಿಂಚಾಚಾರ ಭುಗಿಲೆದ್ದಿದೆ. ಗಲಭೆಗೆ ಒಬ್ಬರು ಬಲಿಯಾಗಿದ್ದಾರೆ

ಶ್ರೀಲಂಕಾದಲ್ಲಿ ಮುಸ್ಲಿಂ  ಸಮುದಾಯದವರು ಹೆಚ್ಚಾಗಿ ನೆಲೆಸಿರುವ  ಪ್ರದೇಶಗಳಲ್ಲಿ ಹಿಂಸಾಚಾರ ಮುಗಿಲು ಮುಟ್ಟಿದ್ದು, ಮುಸ್ಲಿಂ ಸಮುದಾಯದ  ಒಡೆತನದ ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡಲಾಗುತ್ತಿದೆ.

ಹಿಂಸಾಚಾರದ ಹಿನ್ನೆಲೆಯಲ್ಲಿ  ಕುಲಿಯಪಿತಿಯಾ, ಬಿಂಗಿರಿಯಾ, ದುಮ್ಮಲ ಸುರಿಯಾ ಮತ್ತು ಹೆಟ್ಟಿಪೋಲಾ ಪಟ್ಟಣದಲ್ಲಿ ಗಲಭೆ ಆರಂಭವಾದ್ದರಿಂದ ಮತ್ತೆ ಕರ್ಫ್ಯೂ ಹೇರಲಾಗಿದೆ.

ಪುಟ್ಟಲಂ ಜಿಲ್ಲೆಯಲ್ಲಿ 45ರ ಹರೆಯದ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಮಾರಕಾಯುಧಗಳಿಂದ ಹಲ್ಲೆ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪೊಲೀಸರು ಗಲಭೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News