ಚುನಾವಣೋತ್ತರ ಸಮೀಕ್ಷೆಯನ್ನು ನಂಬಲು ಸಾಧ್ಯವಿಲ್ಲ: ಎಚ್.ಆಂಜನೇಯ

Update: 2019-05-20 16:23 GMT

ಬೆಂಗಳೂರು, ಮೇ 20: ಚುನಾವಣೋತ್ತರ ಸಮೀಕ್ಷೆಗಳು ನಿಖರವಾಗಿರುವುದಿಲ್ಲ. ಎನ್‌ಡಿಎಗೆ 300ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ ಎಂಬುದು ನಂಬಲು ಸಾಧ್ಯವಿಲ್ಲವೆಂದು ಮಾಜಿ ಸಚಿವ ಎಚ್.ಅಂಜನೇಯ ಅಭಿಪ್ರಾಯಿಸಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಚರ್ಚೆಗಾಗಿ ಚುನಾವಣೋತ್ತರ ಸಮೀಕ್ಷೆಗಳು ನಡೆದಿವೆ ಎಂದೆನಿಸುತ್ತಿದೆ. ರಾಜ್ಯದಲ್ಲಿ ಬಿಜೆಪಿಗೆ 20ಕ್ಕೂ ಹೆಚ್ಚು ಸ್ಥಾನಗಳು ಬರಲಿವೆ ಎಂದರೆ ಹೇಗೆ ನಂಬುವುದು. ನಮ್ಮ ಲೆಕ್ಕಾಚಾರದ ಪ್ರಕಾರ ಮೈತ್ರಿ ಪಕ್ಷಕ್ಕೆ 16ಕ್ಕೂ ಹೆಚ್ಚು ಸ್ಥಾನಗಳು ಬರುವುದು ಖಚಿತವೆಂದು ತಿಳಿಸಿದರು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಆಡಳಿತ ನಡೆಸಲು ಕಾಂಗ್ರೆಸ್‌ನ ಯಾರ ನಾಯಕರು ಸಮಸ್ಯೆ ಮಾಡಿಲ್ಲ. ಸಮ್ಮಿಶ್ರ ಸರಕಾರದ ಆಡಳಿತವು ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ. ಕೆಲವರು ನೀಡುವ ಸಣ್ಣಪುಟ್ಟ ಹೇಳಿಕೆಗಳೇ ದೊಡ್ಡದಾಗಿ ಬಂಬಿಸಲಾಗುತ್ತಿದೆ ಎಂದು ಅವರು ಹೇಳಿದರು.

ನಮ್ಮ ಹೈಕಮಾಂಡ್ ಸಂಸ್ಕೃತಿ. ಪಕ್ಷದ ಮುಖ್ಯಸ್ಥರು ಸೂಚನೆಯಂತೆ ರಾಜ್ಯ, ಜಿಲ್ಲಾ. ತಾಲೂಕು ನಾಯಕರು ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ಎಲ್ಲಿಯೂ ಗೊಂದಲವಿಲ್ಲ. ರಾಹುಲ್‌ಗಾಂಧಿ ರಾಜ್ಯ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿದ್ದು, ಸಮಸ್ಯೆ ಉದ್ಬವಿಸುವ ಮಾತೆ ಇಲ್ಲವೆಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News