ಪಿಎಂಎಲ್‌ಎ ಪ್ರಕರಣ: ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ವಾದ್ರಾರಿಂದ ನ್ಯಾಯಾಲಯಕ್ಕೆ ಅರ್ಜಿ

Update: 2019-05-21 17:38 GMT

ಹೊಸದಿಲ್ಲಿ,ಮೇ 21: ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಪ್ರಕರಣದಲ್ಲಿ ಆರೋಪಿಯಾಗಿರುವ ಉದ್ಯಮಿ ರಾಬರ್ಟ್ ವಾದ್ರಾ ಅವರು ವಿದೇಶ ಪ್ರಯಾಣಕ್ಕೆ ಅನುಮತಿ ಕೋರಿ ಮಂಗಳವಾರ ಇಲ್ಲಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಾದ್ರಾರ ಭದ್ರತೆಯ ವಿಷಯವಾಗಿರುವುದರಿಂದ ಅವರ ಪ್ರಯಾಣದ ವಿವರಗಳನ್ನು ಮೂರನೇ ಪಕ್ಷದೊಂದಿಗೆ ಹಂಚಿಕೊಳ್ಳದಂತೆ ಅವರ ಪರ ವಕೀಲರು ವಿಶೇಷ ನ್ಯಾಯಾಧೀಶ ಅರವಿಂದ ಕುಮಾರ್ ಅವರನ್ನು ಕೋರಿಕೊಂಡರು.

ಎ.1ರಂದು ವಾದ್ರಾಗೆ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯವು ಇತರ ಷರತ್ತುಗಳೊಂದಿಗೆ ತನ್ನ ಪೂರ್ವಾನುಮತಿಯಿಲ್ಲದೆ ದೇಶ ಬಿಟ್ಟು ತೆರಳದಂತೆ ನಿರ್ದೇಶ ನೀಡಿತ್ತು.

ಲಂಡನ್‌ನಲ್ಲಿ 1.9 ಮಿಲಿಯನ್ ಪೌಂಡ್ ಮೌಲ್ಯದ ಆಸ್ತಿ ಖರೀದಿಯಲ್ಲಿ ಅಕ್ರಮ ಹಣದ ವಹಿವಾಟು ನಡೆಸಿದ ಆರೋಪವನ್ನು ವಾದ್ರಾ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News