ಎನ್ ಡಿಎಗೆ 272 ಸ್ಥಾನ ಸಿಗದಿದ್ದರೆ ಕಾಂಗ್ರೆಸ್ ಹಕ್ಕು ಮಂಡನೆ

Update: 2019-05-22 05:36 GMT

ಹೊಸದಿಲ್ಲಿ. ಮೇ 22: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 272 ಸ್ಥಾನಗಳನ್ನು ಗಳಿಸಲು ವಿಫಲವಾದರೆ ಕಾಂಗ್ರೆಸ್  ಮತ್ತು ಅದರ ಮಿತ್ರಪಕ್ಷಗಳು ಸರಕಾರ ರಚನೆಗೆ ಹಕ್ಕು ಮಂಡಿಸಲು ತಯಾರಿ ನಡೆಸಿದೆ.

ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಮೇ 23ರಂದು ಪ್ರಕಟಗೊಳ್ಳಲಿರುವ ಫಲಿತಾಂಶದ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳು ಆಡಳಿತಾರೂಢ ಎನ್ ಡಿಎ  ಬಹುಮತದೊಂದಿಗೆ ಮರಳಿ ಅಧಿಕಾರಕ್ಕೆ  ಬರುವ ಸೂಚನೆ ನೀಡಿದೆ. ಆದರೆ ಕೆಲವು ವಿಪಕ್ಷಗಳು ಈ ಸಮೀಕ್ಷೆಯನ್ನು ಒಪ್ಪಲು ತಯಾರಿಲ್ಲ. 2004ರಲ್ಲಿ ಸಮೀಕ್ಷೆಯಲ್ಲಿ ಕಂಡು ಬಂದಂತೆ ಫಲಿತಾಂಶ ಬರಲಿಲ್ಲ. ಈ ಕಾರಣದಿಂದಾಗಿ ಕೆಲವು ಪಕ್ಷಗಳು ಸಮೀಕ್ಷೆಯನ್ನು ಒಪ್ಪಲು  ತಯಾರಿಲ್ಲ ಎಂದು ತಿಳಿದು ಬಂದಿದೆ.

ಎನ್ ಡಿಎಗೆ ಸರಕಾರ ರಚಿಸುವಷ್ಟು ಬಹುಮತ ಸಿಗದಿದ್ದರೆ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳು ಸರಕಾರ ರಚನೆಗೆ ಕಸರತ್ತು ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News