ಮೇ 26ರ ವರೆಗೂ ರಾಜಧಾನಿಯಲ್ಲಿ ಮಳೆ ಸಾಧ್ಯತೆ

Update: 2019-05-23 19:26 GMT

ಬೆಂಗಳೂರು, ಮೇ 23: ದಕ್ಷಿಣ ಒಳನಾಡಿನಲ್ಲಿ ಸೃಷ್ಟಿಯಾಗಿರುವ ಟ್ರಫ್‌ನಿಂದ ಪೂರ್ವ ಮುಂಗಾರು ಮಳೆ ಚುರುಕಾಗಿರುವುದರಿಂದ ಮೇ 26ರವರೆಗೂ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರ ಜತೆಗೆ ತಾಪಮಾನ ತುಸು ಏರಿಕೆಯಾಗಿದೆ.

ಪೂರ್ವ ಮುಂಗಾರು ಮಳೆ ನಗರದಲ್ಲಿ ಸದ್ಯಕ್ಕೆ ನಿಂತಿದ್ದರೂ, ಪಕ್ಕದ ಜಿಲ್ಲೆಗಳಲ್ಲಿ ಚದುರಿದಂತೆ ಇನ್ನೂ ಸುರಿಯುತ್ತಿದೆ. ಇದರಿಂದಾಗಿ ನಗರದಲ್ಲಿ ತಾಪಮಾನ 34 ಡಿಗ್ರಿ ಸೆಲ್ಸಿಯಸ್‌ನಲ್ಲೆ ಮುಂದುವರಿದಿದೆ. ನಿನ್ನೆ ನಗರದ ಕೇಂದ್ರಭಾಗಗಳಲ್ಲಿ 34.8 ಡಿಗ್ರಿ, ಎಚ್‌ಎಎಲ್‌ನಲ್ಲಿ 34.2 ಡಿಗ್ರಿ, ಕೆಐಎಎಲ್‌ನಲ್ಲಿ 34.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಶುಕ್ರವಾರ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆ ಇದೆ.

ಮೇ 26 ರವರೆಗೆ ಪ್ರತಿ ದಿನ ಸಂಜೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮಳೆ ಬರುವ ವೇಳೆ ಗಂಟೆಗೆ 30-40 ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News