ಅಮಿತ್ ಶಾ ಕೇಂದ್ರ ಸಚಿವ ಸಂಪುಟ ಪ್ರವೇಶ ?

Update: 2019-05-24 06:21 GMT

ಹೊಸದಿಲ್ಲಿ, ಮೇ 24: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಪೂರ್ವ ಗೆಲುವಿನ   ಸಾರಥ್ಯ ವಹಿಸಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನವನ್ನಲಂಕರಿಸುವ ಸಾಧ್ಯತೆ  ಇದೆ.
ಮೊದಲ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಭರ್ಜರಿ ಗೆಲುವಿನೊಂದಿಗೆ ಲೋಕಸಭೆಗೆ ಆಯ್ಕೆಯಾಗಿರುವ ಅಮಿತ್  ಶಾ ಅವರು ಮೋದಿ  ಸಚಿವ ಸಂಪುಟ ಸೇರುವ ಎಲ್ಲ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಶಾ ಸಚಿವರಾಗುವ ವಿಚಾರದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ಒಂದು ವೇಳೆ ಶಾ ಸಚಿವರಾದರೆ  ಬಿಜೆಪಿ ಸಾರಥ್ಯ ವಹಿಸಲು ಇನ್ನೊಬ್ಬ ಪ್ರಬಲ ನಾಯಕನ ಅಗತ್ಯವಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಬಿಜೆಪಿಗೆ ಮೋದಿ-ಶಾ ನಾಯಕರಾಗಿದ್ದಾರೆ. ಅವರನ್ನು ಹೊರತುಪಡಿಸಿದರೆ ಪರ್ಯಾಯ ನಾಯಕರು  ರೂಪುಗೊಂಡಿಲ್ಲ  ಎನ್ನಲಾಗಿದೆ.  ಸಚಿವ ಸಂಪುಟದಲ್ಲಿ   ಆಯಕಟ್ಟಿನ ಸ್ಥಾನವನ್ನು ಹಿಂದೆ ಸೇವೆ ಸಲ್ಲಿಸಿದ್ದ ಬಿಜೆಪಿಯ ಹಿರಿಯ ನಾಯಕರು ಅಲಂಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News