ನಾಳೆ ಸಿಇಟಿ ಫಲಿತಾಂಶ ಪ್ರಕಟ

Update: 2019-05-24 11:59 GMT

ಬೆಂಗಳೂರು, ಮೇ 24: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ 2019-20ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಮೇ 25ರಂದು ಪ್ರಕಟವಾಗಲಿದೆ.

ಮೇ 25ರ ಬೆಳಗ್ಗೆ 11ಕ್ಕೆ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಿಇಟಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 1ರ ನಂತರ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ. ಎ.29, 30ರಂದು ನಡೆದ ಸಿಇಟಿಯಲ್ಲಿ 1.94 ಲಕ್ಷ ವಿದ್ಯಾರ್ಥಿಗಳು ಬರೆದಿದ್ದರು.

ವೆಬ್‌ಸೈಟ್ ವಿಳಾಸ: http://kea.kar.nic.in , http://cet.kar.nic.in , http://karresults.nic.in ಇಲ್ಲಿ ಸಿಇಟಿ ಫಲಿತಾಂಶ ನೋಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News