11 ಭಾರತೀಯರಿಗೆ ಸ್ವಿಸ್ ಬ್ಯಾಂಕ್ ನೋಟಿಸ್

Update: 2019-05-27 10:22 GMT

ಹೊಸದಿಲ್ಲಿ, ಮೇ 27: ಈ ವರ್ಷದ ಮಾರ್ಚ್ ತಿಂಗಳಿನಿಂದೀಚೆಗೆ ಸ್ವಿಸ್ ಬ್ಯಾಂಕ್ ಗಳಲ್ಲಿ  ಠೇವಣಿ ಹೊಂದಿರುವ ಕನಿಷ್ಠ 25 ಮಂದಿ ಭಾರತೀಯರಿಗೆ ಅಲ್ಲಿನ ಸರಕಾರ ನೋಟಿಸ್ ಜಾರಿಗೊಳಿಸಿದ್ದರೆ, ಈ ಪೈಕಿ 11 ಮಂದಿಗೆ ಮೇ 21ರಂದು ನೋಟಿಸ್ ಗಳನ್ನು ಜಾರಿಗೊಳಿಸಲಾಗಿದೆ.

ಭಾರತ ಸರಕಾರದೊಂದಿಗೆ ಕಪ್ಪು ಹಣ ಮಾಹಿತಿ ವಿನಿಮಯ ಕುರಿತಾದ ಒಪ್ಪಂದದಂತೆ ಸ್ವಿಸ್ ಬ್ಯಾಂಕ್ ನಲ್ಲಿರುವ ಠೇವಣಿಗಳ ಮಾಹಿತಿಯನ್ನು ಭಾರತ ಸರಕಾರಕ್ಕೆ ನೀಡುವ  ಬಗ್ಗೆ ಈ ನೋಟಿಸ್ ನಲ್ಲಿ ಹೇಳಲಾಗಿದೆ. ಒಂದು ವೇಳೆ ನೋಟಿಸ್ ತಲುಪಿದ 30 ದಿನಗಳೊಳಗಾಗಿ ಸಂಬಂಧಿತರು  ಮೇಲ್ಮನವಿ ಸಲ್ಲಿಸದೇ ಇದ್ದಲ್ಲಿ ಭಾರತ ಸರಕಾರಕ್ಕೆ ಅವರ ಠೇವಣಿಗಳ ಬಗ್ಗೆ ಮಾಹಿತಿಗಾಗಿ ಆಡಳಿತಾತ್ಮಕ ಸಹಾಯ ನೀಡಲಾಗುವುದು ಎಂದು ಸ್ವಿಝರ್ಲ್ಯಾಂಡ್ ಸರಕಾರ ಈ ನೋಟಿಸ್ ನಲ್ಲಿ ಹೇಳಿದೆ.

ಮೇ 21ರಂದು ನೀಡಿದ ನೋಟಿಸಿನಲ್ಲಿ ಕೇವಲ ಇಬ್ಬರ ಪೂರ್ಣ ಹೆಸರುಗಳನ್ನು ನೀಡಲಾಗಿದೆ- ಕೃಷ್ಣ ಭಗವಾನ್ ರಾಮಚಂದ್ (ಜನನ ವರ್ಷ ಮೇ 1949), ಕಲ್ಪೇಶ್ ಹರ್ಷದ್ ಕಿನಾರಿವಾಲ (ಜನನ ಸೆಪ್ಟೆಂಬರ್ 1972). ಆದರೆ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿಲ್ಲ. ಉಳಿದಂತೆ ನೋಟಿಸ್ ಜಾರಿಗೊಳಿಸಿದ ಇತರರ  ಹೆಸರುಗಳ ಮೊದಲ  ಅಕ್ಷರಗಳನ್ನು ಮಾತ್ರ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News