ಮೋದಿ ಪ್ರಮಾಣಕ್ಕೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಮಮತಾ ಉತ್ತರ ಏನು ಗೊತ್ತೇ?

Update: 2019-05-28 15:24 GMT

ಹೊಸದಿಲ್ಲಿ, ಮೇ 28: ಇದೇ ತಿಂಗಳ 30ರಂದು ದೇಶದ ಪ್ರಧಾನಿಯಾಗಿ 2ನೆ ಬಾರಿಗೆ ನರೇಂದ್ರ ಮೋದಿಯವರು ಪ್ರಮಾವಚನ ಸ್ವೀಕರಿಸಲಿದ್ದು, ಇದಕ್ಕಾಗಿ ಸರ್ವಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ‘ನೀವು ಮೋದಿಯವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಮಮತಾ ಬ್ಯಾನರ್ಜಿ, “ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನ್ನಿಂದಾದಷ್ಟು ಪ್ರಯತ್ನ ನಡೆಸುತ್ತೇನೆ” ಎಂದಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭ ಮೋದಿ ಮತ್ತು ಮಮತಾ ಬ್ಯಾನರ್ಜಿ ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದರು. ಚಂಡಮಾರುತಕ್ಕೆ ಸಂಬಂಧಿಸಿ ಮಾಹಿತಿಗಾಗಿ ಮಮತಾ ಕಚೇರಿಗೆ ಪ್ರಧಾನಿ ಕಚೇರಿಯಿಂದ ಕರೆ ಮಾಡಲಾಗಿತ್ತಾದರೂ ಅವರು ಸ್ವೀಕರಿಸಲಿಲ್ಲ ಎನ್ನುವ ಆರೋಪಗಳಿಗೆ ಉತ್ತರಿಸಿದ್ದ ಮಮತಾ ಬ್ಯಾನರ್ಜಿ, “ಮೋದಿಯನ್ನು ನಾನು ಪ್ರಧಾನಿಯಾಗಿ ಪರಿಗಣಿಸಿಲ್ಲ” ಎಂದಿದ್ದರು.

“2ನೆ ಬಾರಿ ಪ್ರಧಾನಿಯಾಗಿ ಮೋದಿ ಪ್ರಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಎನ್ ಡಿಎಯೇತರ ಸರಕಾರಗಳಿರುವ ರಾಜ್ಯಗಳ ಸಿಎಂಗಳ ಜೊತೆ ಮಾತನಾಡಿದ್ದೇನೆ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದಿದ್ದಾರೆ. ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇನೆ” ಎಂದು ಮಮತಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News