ಇರಾನ್ ತೈಲ ಖರೀದಿಗೆ ಯಾವುದೇ ದೇಶಕ್ಕೆ ವಿನಾಯಿತಿ ಇಲ್ಲ: ಅಮೆರಿಕ ಸ್ಪಷ್ಟನೆ

Update: 2019-05-29 18:46 GMT

ವಾಶಿಂಗ್ಟನ್, ಮೇ 29: ಇರಾನ್‌ನಿಂದ ತೈಲ ಖರೀದಿಸಿದರೆ, ಭಾರತ ಸೇರಿದಂತೆ ಯಾವುದೇ ದೇಶಕ್ಕೆ ಆರ್ಥಿಕ ದಿಗ್ಬಂಧನದಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.

ಇರಾನ್ ಮೇಲಿನ ಅಮೆರಿಕದ ಗರಿಷ್ಠ ಒತ್ತಡ ಅಭಿಯಾನ ಪರಿಣಾಮ ಬೀರುತ್ತಿದೆ ಹಾಗೂ ಇರಾನ್ ಕುರಿತ ಕಠಿಣ ನೀತಿಯಿಂದ ಟ್ರಂಪ್ ಆಡಳಿತ ವಿಚಲಿತಗೊಳ್ಳುವುದಿಲ್ಲ ಎಂದು ಅದು ಹೇಳಿದೆ.

ಇರಾನ್‌ನ ತೈಲ ರಫ್ತು ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಪಣತೊಟ್ಟಿರುವ ಅಮೆರಿಕವು, ಭಾರತದಂಥ ದೇಶಗಳಿಗೆ ಇರಾನ್‌ನಿಂದ ತೈಲ ಖರೀದಿಸಲು ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ಸ್ಪಷ್ಟವಾಗಿ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

‘‘ಇರಾನ್‌ನ ತೈಲ ರಫ್ತು ಶೂನ್ಯಕ್ಕೆ ಇಳಿಯುವುದನ್ನು ಖಾತರಿಪಡಿಸುವ ನಿಟ್ಟಿನಲ್ಲಿ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಎಪ್ರಿಲ್ 22ರಿಂದ ಸ್ಪಷ್ಟ ನಿಲುವನ್ನು ಹೊಂದಿದ್ದಾರೆ’’ ಎಂದು ಮಂಗಳವಾರ ವಾಶಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರೆ ಮೋರ್ಗನ್ ಒರ್ಟಾಗಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News