ಅಫ್ಘಾನ್‌ನ ಐತಿಹಾಸಿಕ ಸ್ತಂಭದ ಮೇಲೆ ತಾಲಿಬಾನ್ ದಾಳಿ: 18 ಭದ್ರತಾ ಸಿಬ್ಬಂದಿ ಸಾವು

Update: 2019-05-29 18:47 GMT

ಹೆರಾತ್ (ಅಫ್ಘಾನಿಸ್ತಾನ), ಮೇ 29: ಅಫ್ಘಾನಿಸ್ತಾನದ ಐತಿಹಾಸಿಕ ‘ಜಾಮ್’ ಸ್ತಂಭಕ್ಕೆ ರಕ್ಷಣೆ ನೀಡುವ ಹಲವಾರು ಭದ್ರತಾ ಠಾಣೆಗಳ ಮೇಲೆ ದಾಳಿ ನಡೆಸಿರುವ ತಾಲಿಬಾನ್ ಭಯೋತ್ಪಾದಕರು, 18 ಮಂದಿ ಭದ್ರತಾ ಸಿಬ್ಬಂದಿಯನ್ನು ಕೊಂದಿದ್ದಾರೆ.

 ಪಶ್ಚಿಮ ಅಫ್ಘಾನಿಸ್ತಾನದ ಘೋರ್ ರಾಜ್ಯದ ದುರ್ಗಮ ಪ್ರದೇಶವೊಂದರಲ್ಲಿ ಇರುವ 12ನೇ ಶತಮಾನದ ಸ್ತಂಭವು ಪ್ರವಾಹ ಭೀತಿಗೆ ಒಳಗಾದ ಒಂದು ವಾರದ ಬಳಿಕ ತಾಲಿಬಾನಿಗಳ ದಾಳಿಯನ್ನು ಎದುರಿಸುತ್ತಿದೆ.

‘‘ಸ್ತಂಭದ ಸುತ್ತಲಿನ ಕೆಲವು ಭದ್ರತಾ ಠಾಣೆಗಳನ್ನು ತಾಲಿಬಾನ್ ವಶಪಡಿಸಿಕೊಂಡಿದೆ. ಹೆಚ್ಚಿನ ಕಾಳಗವು ಸ್ತಂಭಕ್ಕೆ ಹಾನಿಯುಂಟು ಮಾಡುವುದರಿಂದ ನಾವು ಅಲ್ಲಿಂದ ಹಿಂದೆ ಸರಿಯಬೇಕಾಯಿತು’’ ಎಂದು ಘೋರ್ ರಾಜ್ಯದ ಪೊಲೀಸ್ ಅಧಿಕಾರಿಯೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

15 ಸರಕಾರ ಪರ ಹೋರಾಟಗಾರರು ಮತ್ತು ಮೂವರು ಪೊಲೀಸರು ಸೋಮವಾರ ಆರಂಭಗೊಂಡ ದಾಳಿಗಳಲ್ಲಿ ಹತರಾಗಿದ್ದಾರೆ ಎಂದು ರಾಜ್ಯದ ಗವರ್ನರ್‌ರ ವಕ್ತಾರರೊಬ್ಬರು ಹೇಳಿದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News