ಮದ್ರಸ, ಧಾರ್ಮಿಕ ಶಾಲೆಗಳ ಆಧುನೀಕರಣ: ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಮಸೂದೆಯಲ್ಲಿ ಇರುವುದೇನು?

Update: 2019-06-02 15:03 GMT

ಹೊಸದಿಲ್ಲಿ, ಜೂ.1: ಮುಸ್ಲಿಮರು ಮತ್ತು ಶೈಕ್ಷಣಿಕ ಪ್ರತಿನಿಧಿತ್ವ ಹೊಂದಿರದ ಇತರ ಅಲ್ಪಸಂಖ್ಯಾತ ಸಮುದಾಯಗಳು ಶಾಲಾ ಶಿಕ್ಷಣ ಪೂರ್ಣಗೊಳಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ನೂತನ ರಾಷ್ಟ್ರೀಯ ಶಿಕ್ಷಣ ಕರಡು ಮಸೂದೆಯಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕ್ರಮಗಳ ಪೈಕಿ, ಮದ್ರಸ ಮತ್ತು ಇತರ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಆಧುನೀಕರಣ ಮತ್ತು ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ಉತ್ತಮ ಶಾಲೆಗಳನ್ನು ಸ್ಥಾಪಿಸುವ ಪ್ರಸ್ತಾವನೆವೂ ಸೇರಿದೆ.

ಡಿಸೆಂಬರ್ 15, 2018ರಲ್ಲಿ ಅಂದಿನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಹಸ್ತಾಂತರಿಸಲಾದ ಕರಡು ಮಸೂದೆಯಲ್ಲಿ, ಮದ್ರಸಗಳು, ಮಕ್ತಬ್‌ಗಳು, ಗುರುಕುಲಗಳು, ಪಾಠಶಾಲೆಗಳು ಮತ್ತು ಹಿಂದು, ಸಿಖ್, ಜೈನ, ಬೌದ್ಧ ಮತ್ತು ಇತರ ಸಂಪ್ರದಾಯಗಳ ಧಾರ್ಮಿಕ ಶಾಲೆಗಳು ತಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳುವಂತೆ ಪ್ರೋತ್ಸಾಹ ನೀಡುವ ಜೊತೆಗೆ ರಾಷ್ಟ್ರೀಯ ಪಠ್ಯಕ್ರಮ ವ್ಯವಸ್ಥೆಯನ್ನೂ ತಮ್ಮ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣದಲ್ಲಿ ಈ ಶಾಲೆಗಳಿಂದ ವಿದ್ಯಾರ್ಥಿಗಳ ಪ್ರತಿನಿಧಿತ್ವ ಕೊರತೆಯನ್ನು ಹೋಗಲಾಡಿಸುವಂತೆ ನೋಡಿಕೊಳ್ಳಲಾಗಿದೆ ಎಂದು ಕರಡು ಮಸೂದೆ ಸಮಿತಿ ಮುಖ್ಯಸ್ಥ, ಇಸ್ರೋದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್ ತಿಳಿಸಿದ್ದಾರೆ.

ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸಲು ಮತ್ತು ಬಲಪಡಿಸಲು, ಈ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ, ಗಣಿತ, ಸಾಮಾಜಿಕ ಅಧ್ಯಯನ, ಹಿಂದಿ, ಇಂಗ್ಲಿಷ್ ಅಥವಾ ಇತರ ಸಂಬಂಧಿತ ಭಾಷೆಗಳನ್ನು ಪರಿಚಯಿಸಲು ಆರ್ಥಿಕ ನೆರವು, ಮದರಸ, ಮಕ್ತಬಗಳು ಮತ್ತು ಇತರ ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ಮಕ್ಕಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಮೌಲ್ಯಮಾಪನ ಮತ್ತು ರಾಜ್ಯ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಗಳಿಗೆ ಹಾಜರಾಗುವ ಅವಕಾಶ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ನೋಂದಾಯಿಸಿಕೊಳ್ಳಲು ಅವಕಾಶ. ಶಿಕ್ಷಕರ ಸಾಮರ್ಥ್ಯ ಹೆಚ್ಚಳ ಮತ್ತು ಗ್ರಂಥಾಲಯಗಳು ಹಾಗೂ ಪ್ರಯೋಗಾಲಯಗಳ ಉನ್ನತೀಕರಣ ಮತ್ತು ಕಲಿಕಾ ಸಾಮಾಗ್ರಿಗಳ ಒದಗಿಸುವಿಕೆ ಇತ್ಯಾದಿ ಕ್ರಮಗಳನ್ನು ಅಳವಡಿಸಿಕೊಳ್ಳಲು ಮಸೂದೆಯಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News