ದುಬೈ: ಭೀಕರ ಬಸ್ ಅಪಘಾತಕ್ಕೆ 15 ಮಂದಿ ಬಲಿ

Update: 2019-06-06 18:30 GMT

ದುಬೈ, ಜೂ.6: ಭೀಕರ ಬಸ್ ಅಪಘಾತದಲ್ಲಿ 15 ಮಂದಿ ಮೃತಪಟ್ಟು ಐದು ಮಂದಿ ಗಾಯಗೊಂಡ ಘಟನೆ ಇಲ್ಲಿನ ಶೇಕ್ ಮುಹಮ್ಮದ್ ಬಿನ್ ಝಯೇದ್ ರಸ್ತೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಈದ್ ರಜೆ ಮುಗಿಸಿ ಒಮನ್‌ನಿಂದ ಮರಳುತ್ತಿದ್ದ ಪ್ರಯಾಣಿಕರಿಂದ ತುಂಬಿದ್ದ ಬಸ್ ರಸ್ತೆ ಬದಿಯ ಫಲಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ ಎಂದು ದುಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ.

ವಿವಿಧ ರಾಷ್ಟ್ರೀಯತೆಯ 31 ಪ್ರಯಾಣಿಕರನ್ನು ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಗಾಯಗೊಂಡ ಐದು ಮಂದಿ ಹಾಗೂ ಮೃತದೇಹಗಳನ್ನು ರಶೀದ್ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News