ಹಾಸಿಗೆಯಿಲ್ಲದೆ ನೆಲದಲ್ಲೇ ರೋಗಿಗಳಿಗೆ ಚಿಕಿತ್ಸೆ: ಉತ್ತರ ಪ್ರದೇಶದ ವೈದ್ಯಕೀಯ ದುರವಸ್ಥೆ

Update: 2019-06-09 08:06 GMT
ಫೋಟೊ ಕೃಪೆ: ANI

ರಾಮಪುರ (ಉತ್ತರ ಪ್ರದೇಶ), ಜೂ.9: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಬೆಡ್ ಕೊರತೆಯಿಂದಾಗಿ ರೋಗಿಗಳಿಗೆ ನೆಲದಲ್ಲೇ ಚಿಕಿತ್ಸೆ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಕೈಯಲ್ಲಿ ಡ್ರಿಪ್ ಅಳವಡಿಸಿರುವ ರೋಗಿಗಳನ್ನು ನೆಲದಲ್ಲೇ ಮಲಗಿಸಲಾಗಿದೆ. ಡ್ರಿಪ್ ಬಾಟಲಿಗಳನ್ನು ಕಿಟಕಿಗಳಿಗೆ ತೂಗುಹಾಕಲಾಗಿದೆ. ದಿಢೀರನೇ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಆಸ್ಪತ್ರೆಯಲ್ಲಿ ಬೆಡ್ ಸೌಲಭ್ಯ ಇಲ್ಲದಿರುವುದರಿಂದ ಅನಿವಾರ್ಯವಾಗಿ ನೆಲದಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ ಎಂದು ಕರ್ತವ್ಯನಿರತ ವೈದ್ಯರೊಬ್ಬರು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆಯಿಂದಾಗಿ 3-4 ಮಂದಿ ಒಂದೇ ಹಾಸಿಗೆಯಲ್ಲಿ ಮಲಗಬೇಕಾಗಿದೆ ಎಂದು ಮುಹಮ್ಮದ್ ಸಮೀರ್ ಅಹ್ಮದ್ ಎಂಬ ರೋಗಿಯೊಬ್ಬರು ಹೇಳಿದ್ದಾರೆ. ಇತರ ಹಲವು ಮಂದಿ ರೋಗಿಗಳು ಇದೇ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News