ದಿಕ್ಕು ಬದಲಿಸಿದ ವಾಯು ಚಂಡಮಾರುತ, ಗುಜರಾತ್‌ನಲ್ಲಿ ಭೂಕುಸಿತ ಉಂಟು ಮಾಡದು: ಹವಾಮಾನ ಇಲಾಖೆ

Update: 2019-06-13 04:56 GMT

ಹೊಸದಿಲ್ಲಿ, ಜೂ.13: ವಾಯು ಚಂಡಮಾರುತ ರಾತೋರಾತ್ರಿ ತನ್ನ ದಿಕ್ಕು ಬದಲಿಸಿದ ಹಿನ್ನೆಲೆಯಲ್ಲಿ ಅದುಗುಜರಾತ್‌ನಲ್ಲಿ ಭೂಕುಸಿತ ಉಂಟು ಮಾಡದು ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ವಾಯು ಚಂಡಮಾರುತ ಅಪ್ಪಳಿಸುವ ಸಾಧ್ಯತೆಯನ್ನು ಮನಗಂಡು ಗುಜರಾತ್ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಸೌರಾಷ್ಟ್ರ ಹಾಗೂ ಕಚ್ ವಲಯಗಳಲ್ಲಿನ ತಗ್ಗುಪ್ರದೇಶದಲ್ಲಿ ವಾಸವಿರುವ ಸುಮಾರು 3 ಲಕ್ಷ ಜನರನ್ನು ತೆರವುಗೊಳಿಸಲಾಗಿತ್ತು.

‘‘ಇದು(ವಾಯು ಚಂಡಮಾರುತ)ಭೂಕುಸಿತ ಉಂಟು ಮಾಡದು. ಇದು ಕೇವಲ ಸಮುದ್ರದ ತೀರಕ್ಕೆ ಅಪ್ಪಳಿಸಲಿದೆ. ಇದು ಸ್ವಲ್ಪ ವಿಚಲನ ಉಂಟು ಮಾಡಬಲ್ಲದು. ಚಂಡಮಾರುತ ಪರಿಣಾಮದಿಂದ ಬಲವಾದ ಗಾಳಿ ಹಾಗೂ ಬಿರುಸಿನ ಮಳೆ ಸುರಿಯಲಿದೆ ’’ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News