ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ: ಮಹಾರಾಷ್ಟ್ರದ ಕಾರ್ತಿಕೇಯ್ ಟಾಪರ್

Update: 2019-06-14 10:46 GMT

ಹೊಸದಿಲ್ಲಿ, ಜೂ.14: ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಪ್ರಕಟಗೊಂಡಿದ್ದು, ಮಹಾರಾಷ್ಟ್ರದ ಬಲ್ಲಾರ್ಪುರ್ ಎಂಬಲ್ಲಿನ ಕಾರ್ತಿಕೇಯ್ ಗುಪ್ತಾ ಚಂದ್ರೇಶ್ ಅಖಿಲ ಭಾರತ ಮಟ್ಟದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅವರು 100 ಎನ್‍ಟಿಎ ಸ್ಕೋರ್ ದಾಖಲಿಸಿದ್ದಾರೆ ಹಾಗೂ ಒಟ್ಟು 372 ಅಂಕಗಳಲ್ಲಿ 346 ಅಂಕಗಳನ್ನು ಪಡೆದಿದ್ದಾರೆ.

ಮಹಿಳಾ ಅಭ್ಯರ್ಥಿಗಳ ಪೈಕಿ ಶಬ್ನಂ ಸಹಾಯ್ ಟಾಪರ್ ಆಗಿದ್ದು ಆಕೆಗೆ 372 ಅಂಕಗಳಲ್ಲಿ 308 ಅಂಕಗಳು ದೊರಕಿವೆ.

 ಮೇ 27ರಂದು ನಡೆದ ಪರೀಕ್ಷೆಯ ಫಲಿತಾಂಶವನ್ನು ಐಐಟಿ ರೂರ್ಕಿ ಬಿಡುಗಡೆಗೊಳಿಸಿದೆ. ಆದರೆ ಹಲವಾರು ಮಂದಿ ಒಮ್ಮೆಗೇ ಫಲಿತಾಂಶ ನೋಡಲು ವೆಬ್ ಸೈಟ್ ಗೆ ಲಾಗ್ ಮಾಡಿದ್ದರಿಂದ ತಾಂತ್ರಿಕ ಸಮಸ್ಯೆಯಿಂದ ವೆಬ್ ಸೈಟ್ ಕ್ರ್ಯಾಶ್ ಆಗಿದ್ದು, ಸದ್ಯದಲ್ಲಿಯೇ ಫಲಿತಾಂಶ ಲಭ್ಯವಾಗಲಿದೆ ಎಂಬ ಮಾಹಿತಿಯಿದೆ.

ಒಟ್ಟು  1,61,319 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 38,705 ಮಂದಿ ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ಅಭ್ಯರ್ಥಿಗಳ ಪೈಕಿ 5,356 ಮಂದಿ ವಿದ್ಯಾರ್ಥಿನಿಯರಾಗಿದ್ದಾರೆ. ಒಟ್ಟು 33349 ಹುಡುಗರು ತೇರ್ಗಡೆಯಾಗಿದ್ದಾರೆ.

ಫಲಿತಾಂಶವು jeeadv.ac.in ವೆಬ್ ತಾಣದಲ್ಲಿ ಲಭ್ಯವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News