ರಾಜ್ಯ ಸರಕಾರ ವಿರುದ್ಧದ ಬಿಜೆಪಿ ಧರಣಿ 2ನೇ ದಿನಕ್ಕೆ

Update: 2019-06-15 16:24 GMT

ಬೆಂಗಳೂರು, ಜೂ.15: ಜಿಂದಾಲ್ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸುವ ಮೂಲಕ ರಾಜ್ಯ ಸರಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿ ಹಾಗೂ ಎಲ್ಲಾ ರಂಗದಲ್ಲೂ ರಾಜ್ಯ ಸರಕಾರ ವೈಫಲ್ಯಕ್ಕೀಡಾಗಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು 2ನೇ ದಿನಕ್ಕೆ ಕಾಲಿಟ್ಟಿದೆ.

ನಗರದ ಆನಂದರಾವ್ ವೃತ್ತದಲ್ಲಿರುವ ಮೌರ್ಯ ಹೋಟೆಲ್ ಬಳಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಡೆಯುತ್ತಿರುವ ಧರಣಿಯಲ್ಲಿ ಬಿಜೆಪಿ ಸಂಸದರು, ಶಾಸಕರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದಾರೆ.

ಅಹೋರಾತ್ರಿ ಧರಣಿ ನಿರತ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ರಾತ್ರಿ 9ಕ್ಕೆ ಭೋಜನ ಮುಗಿಸಿ ರಾತ್ರಿ 10 ಗಂಟೆಗೆ ಧರಣಿ ನಿರತ ಸ್ಥಳದಲ್ಲಿ ಮಲಗಿದ್ದರು. ಪಕ್ಷದ ನಾಯಕರಾದ ಆರ್.ಅಶೋಕ್, ಗೋವಿಂದ ಕಾರಜೋಳ,  ಎನ್.ರವಿಕುಮಾರ್, ಡಾ.ಉಮೇಶ್ ಜಾಧವ್ ಸೇರಿದಂತೆ ಶಾಸಕರು ,ಸಂಸದರು ಮತ್ತು ಮುಖಂಡರು ಯಡಿಯೂರಪ್ಪ ಅವರೊಂದಿಗೆ ಧರಣಿ ನಿರತ ಸ್ಥಳದಲ್ಲೇ ನಿದ್ದೆ ಮಾಡಿದರು.

ಗೃಹ ಕಚೇರಿ ಕೃಷ್ಣಾಗೆ ಬಿಜೆಪಿ ಮುತ್ತಿಗೆ

‘ಜಿಂದಾಲ್ ಕಂಪೆನಿಗೆ ಭೂಮಿ ಹಸ್ತಾಂತರ ಖಂಡಿಸಿ ಬಿಜೆಪಿ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದು ನಾಳೆ(ಜೂ.16) ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವುದರೊಂದಿಗೆ ಸತ್ಯಾಗ್ರಹ ಮುಕ್ತಾಯಗೊಳಿಸಲಾಗುವುದು’

-ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News