ಏಕಕಾಲಕ್ಕೆ ಚುನಾವಣೆ: ಜೂ. 19ರಂದು ಸರ್ವಪಕ್ಷ ಸಭೆ

Update: 2019-06-17 05:41 GMT

ಹೊಸದಿಲ್ಲಿ: ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ "ವನ್ ನೇಷನ್ ವನ್ ಎಲೆಕ್ಷನ್" ಯೋಚನೆ ಕಾರ್ಯಗತಗೊಳಿಸುವ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಜೂ. 19ರಂದು ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ.

ಸೋಮವಾರ 17ನೇ ಲೋಕಸಭೆ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಕರೆದಿದ್ದ ರಾಜಕೀಯ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಈ ಘೋಷಣೆ ಮಾಡಿದರು.

ಸಂಸತ್ತು ಹೊಸ ಉತ್ಸಾಹ ಹಾಗೂ ಹೊಸ ಚಿಂತನೆಯೊಂದಿಗೆ ಆರಂಭವಾಗಬೇಕು ಎಂದು ಆಶಿಸಿದರು. ಸಂಸತ್ತನ್ನು ಹೆಚ್ಚು ಉತ್ಪಾದಕವಾಗಿ ಮಾಡುವ ಮಾರ್ಗೋಪಾಯಗಳ ಬಗ್ಗೆಯೂ ಬುಧವಾರದ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಸಂಸತ್ತಿನಲ್ಲಿ ಅಸ್ತಿತ್ವ ಇರುವ ಎಲ್ಲ ಪಕ್ಷಗಳ ಅಧ್ಯಕ್ಷರಿಗೆ ಸಭೆಗೆ ಆಹ್ವಾನ ನೀಡಲಾಗಿದೆ. ದೇಶಾದ್ಯಂತ ಏಕಕಾಲಕ್ಕೆ ಚುನಾವಣೆ ನಡೆಸುವ ವಿಚಾರದ ಜತೆಗೆ 2022ರಲ್ಲಿ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಬಗ್ಗೆ ಹಾಗೂ ಈ ವರ್ಷದ ಅಕ್ಟೋಬರ್ 2ರಂದು ನಡೆಯುವ ಮಹಾತ್ಮಗಾಂಧೀಜಿಯವರ 150ನೇ ಜಯಂತಿ ಬಗ್ಗೆಯೂ ಚರ್ಚಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News