ಚೆನ್ನೈಯಲ್ಲಿ ನೀರಿಲ್ಲ !

Update: 2019-06-19 18:34 GMT

ಚೆನ್ನೈ, ಜೂ. 19: ಚೆನ್ನೈಯಲ್ಲಿ ಈ ವರ್ಷ 4.6 ದಶಲಕ್ಷ ಜನರು ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ನಡುವೆ ಸುಡುವ ಬೇಗೆಯ ಹೊರತಾಗಿಯೂ ಹೊಟೇಲ್‌ಗಳು ಅತಿಥಿಗಳಿಗೆ ಪೂರೈಸುತ್ತಿರುವ ನೀರಿನ ಪ್ರಮಾಣವನ್ನು ಮಿತಗೊಳಿಸಿದೆ. ಕಂಪೆನಿಗಳು ಕೂಡ ಉದ್ಯೋಗಿಗಳಿಗೆ ಪೂರೈಸುವ ನೀರಿನ ಪ್ರಮಾಣವನ್ನು ಕಡಿಮೆ ಮಾಡಿವೆ.

ಕಳೆದ ವರ್ಷ ಸುರಿದ ಅಲ್ಪ ಮಳೆಯಿಂದಾಗಿ ಚೆನ್ನೈಗೆ ನೀರು ಪೂರೈಸುವ ನಾಲ್ಕು ಜಲಾಶಯಗಳು ಈ ವರ್ಷ ಬೇಸಿಗೆಯಲ್ಲಿ ಒಣಗಿವೆ. ಇದರಿಂದ ಚೆನ್ನೈಗೆ ನೀರಿನ ಕೊರತೆ ಉಂಟಾಗಿದೆ. 2020ರಲ್ಲಿ ಅಂತರ್ಜಲ ಬರಿದಾಗುವುದಾಗಿ ಸರಕಾರದ ಚಿಂತಕರ ವೇದಿಕೆ ಕಳೆದ ವರ್ಷ ಎಚ್ಚರಿಕೆ ನೀಡಿದ 21 ನಗರಗಳಲ್ಲಿ ಚೆನ್ನೈ ಕೂಡ ಒಂದು. ಅಲ್ಲದೆ, ಈ ವರ್ಷ ಮನ್ಸೂನ್ ವಿಳಂಬವಾಗಿದೆ. ಕ್ಯಾಂಟೀನ್ ಹಾಗೂ ವಿಶ್ರಾಂತಿ ಕೊಠಡಿಗಳಲ್ಲಿ ನೀರಿನ ಬಳಕೆ ಮಿತಗೊಳಿಸುವಂತೆ ಫಿಯೆಟ್, ಕ್ರಿಸ್ಲರ್, ಟಿಸಿಎಸ್, ವಿಪ್ರೊ, ಕಾಗ್ನೈಝಂಟ್‌ನಂತಹ ಚೆನ್ನೈ ಮೂಲದ ಕಂಪೆನಿಗಳು ತಮ್ಮ ಉದ್ಯೋಗಿಗಳಲ್ಲಿ ಮನವಿ ಮಾಡಿವೆ. ಕ್ಯಾಂಟಿನ್ ಹಾಗೂ ಜಿಮ್‌ಗಳಲ್ಲಿ ನೀರಿನ ಬಳಕೆಯನ್ನು ಮಿತಗೊಳಿಸಿದ್ದೇವೆ ಎಂದು ಸಾವಿರಾರು ಉದ್ಯೋಗಿಗಳನ್ನು ಹೊಂದಿರುವ ನಗರದ ಕಾಗ್ನೈಝಂಟ್ ಟೆಕ್ನಾಲಜಿ ಸೊಲ್ಯೂಷನ್ (ಸಿಟಿಎಸ್) ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News