ಜಾಗತಿಕ ಗರಿಷ್ಠ ತಾಪಮಾನ: 3 ಮತ್ತು 4ನೇ ಸ್ಥಾನದಲ್ಲಿ ಏಷ್ಯಾದ ಈ 2 ಪ್ರದೇಶಗಳು

Update: 2019-06-20 08:07 GMT

ಜಿನೀವಾ, ಜೂ.20: ಸತತ ಪರಿಶೀಲನೆಯ ನಂತರ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ಏಷ್ಯಾ ಖಂಡಾದಲ್ಲಿಯೇ ಅತ್ಯಧಿಕ ತಾಪಮಾನ ದಾಖಲಾದ ಪ್ರದೇಶಗಳನ್ನು ಗುರುತಿಸಿದೆ.

ಕುವೈತ್ ನ ಮಿತ್ರಿಬಾಹ್ ಎಂಬಲ್ಲಿ ಜುಲೈ 21, 2016ರಂದು ದಾಖಲಾದ 53.9 ಡಿಗ್ರಿ ಸೆಲ್ಸಿಯಸ್ ತಾಪಮಾನ ಹಾಗೂ ಪಾಕಿಸ್ತಾನದ ಟುರ್ಬಟ್ ಎಂಬಲ್ಲಿ ಮೇ 28, 2017ರಂದು ದಾಖಲಾದ 53.7ಡಿಗ್ರಿ ಸೆಲ್ಸಿಯಸ್ ತಾಪಮಾನ ಕಳೆದ 76 ವರ್ಷಗಳಲ್ಲಿಯೇ ಜಗತ್ತಿನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ ಹಾಗೂ ಇಲ್ಲಿಯ ತನಕ ಏಷ್ಯಾ ಖಂಡದ ಯಾವುದೇ ಸ್ಥಳದಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ಡಬ್ಲ್ಯುಎಂಒ ದೃಢೀಕರಿಸಿದೆ.

ಜಾಗತಿಕ ಮಟ್ಟದ ಇದುವರೆಗಿನ ಗರಿಷ್ಠ ತಾಪಮಾನ ಸ್ಥಳಗಳಲ್ಲಿ ಮಿತ್ರಿಬಾಹ್ ಹಾಗೂ ಟುರ್ಬಟ್ ಮೂರನೇ ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ. ಈ ನಿಟ್ಟಿನಲ್ಲಿನ ಡಬ್ಲ್ಯುಎಂಒ ಸಂಪೂರ್ಣ ವರದಿಯ ಮಾಹಿತಿ ಜೂನ್ 17, 2019ರಂದು ಪ್ರಕಟವಾದ ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಲೈಮೆಟಾಲಜಿ ಇದರಲ್ಲಿದೆ. ಸಂಸ್ಥೆಯ ಆರ್ಕೈವ್ ಆಫ್ ವೆದರ್ ಆ್ಯಂಡ್ ಕ್ಲೈಮೇಟ್ ಎಕ್ಸ್‍ಟ್ರೀಮ್ಸ್ ನಲ್ಲಿರುವ ವಿವರದಂತೆ ಜಗತ್ತಿನ ಇತಿಹಾಸದಲ್ಲಿಯೇ ಅತ್ಯಧಿಕ ತಾಪಮಾನ ಜುಲೈ 10, 1913ರಲ್ಲಿ ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯಲ್ಲಿನ ಫರ್ನೇಸ್ ಕ್ರೀಕ್ ನಲ್ಲಿ ದಾಖಲಾಗಿತ್ತು ಹಾಗೂ ಇಲ್ಲಿ ಆ ದಿನ ದಾಖಲಾದ ತಾಪಮಾನ 56.7ಡಿಗ್ರಿ ಸೆಲ್ಸಿಯಸ್ ಆಗಿತ್ತು. ಎರಡನೇ ಅತ್ಯಧಿಕ ಗರಿಷ್ಠ ತಾಪಮಾನ -55.0 ಡಿಗ್ರಿ ಸೆಲ್ಸಿಯಸ್ ಜುಲೈ 1931ರಲ್ಲಿ ಟುನೀಶಿಯಾದ ಕೆಬಿಲಿ ಎಂಬಲ್ಲಿ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News