ಬಿಜೆಪಿ, ಆರೆಸ್ಸೆಸ್ ಸಮಾಜದಲ್ಲಿ ಮುಸ್ಲಿಂ ವಿರೋಧಿ ಭಾವನೆ ಮೂಡಿಸಿವೆ: ಒವೈಸಿ

Update: 2019-06-24 10:47 GMT

ಹೊಸದಿಲ್ಲಿ, ಜೂ.24: ಬಿಜೆಪಿ ಹಾಗೂ ಆರೆಸ್ಸೆಸ್ ಸಮಾಜದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷ ಹೆಚ್ಚಿಸಿರುವುದರಿಂದ ಜಾರ್ಖಂಡ್ ನಲ್ಲಿ ನಡೆದಂತಹ ಗುಂಪು ಥಳಿತ, ಹತ್ಯೆ ಪ್ರಕರಣದಂತಹ ಘಟನೆಗಳು ನಡೆಯುವುದು ನಿಲ್ಲುವುದಿಲ್ಲ ಎಂದು ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ ಹೇಳಿದ್ದಾರೆ.

“ಮುಸ್ಲಿಮರು ಉಗ್ರರು, ದೇಶ ವಿರೋಧಿಗಳು ಹಾಗೂ ಗೋಹತ್ಯೆ ನಡೆಸುವವರು ಎಂಬಂತಹ  ಭಾವನೆಯನ್ನು ಅವರು ಯಶಸ್ವಿಯಾಗಿ ಮೂಡಿಸಿದ್ದಾರೆ'' ಎಂದು ಒವೈಸಿ ಹೇಳಿದ್ದಾರೆ. ಜಾರ್ಖಂಡ್ ನ ಸರೈಕೇಲಾ ಖರ್ಸವಾನಂದ್ ಜಿಲ್ಲೆಯಲ್ಲಿ 22 ವರ್ಷದ ತಬ್ರೇಝ್ ಎಂಬ ಯುವಕನಿಗೆ `ಜೈ ಶ್ರೀ ರಾಮ್' `ಜೈ ಹನುಮಾನ್' ಹೇಳುವಂತೆ ಒತ್ತಾಯಿಸಿ ಗುಂಪೊಂದು ಥಳಿಸಿ ಸಾಯಿಸಿದ ಘಟನೆಯ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News