ಲೋಕಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಟಿಎಂಸಿಯ ನುಸ್ರತ್ ಜಹಾನ್, ಮಿಮಿ ಚಕ್ರವರ್ತಿ

Update: 2019-06-25 09:20 GMT

ಹೊಸದಿಲ್ಲಿ, ಜೂ.25: ನೂತನವಾಗಿ ಚುನಾಯಿತರಾದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ರೂಹಿ ಹಾಗೂ ಮಿಮಿ ಚಕ್ರವರ್ತಿ ಮಂಗಳವಾರ ಲೋಕಸಭಾ ಸದಸ್ಯೆಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ನುಸ್ರತ್ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಇಬ್ಬರೂ ಟರ್ಕಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ಪ್ರಮಾಣವಚನ ಸ್ವೀಕರಿಸಿಲಿರಲಿಲ್ಲ.

 ಟಿಎಂಸಿ ಯುವ ನಾಯಕಿಯರು ಬಂಗಾಳಿ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಲ್ಲದೆ, ಅಂತ್ಯದಲ್ಲಿ ವಂದೇ ಮಾತರಂ, ಜೈ ಹಿಂದಿ ಹಾಗೂ ಜೈ ಬಂಗಾಳ ಎಂದು ಘೋಷಣೆ ಕೂಗಿದರು. ಪ್ರಮಾಣವಚನ ಸ್ವೀಕರಿಸಿದ ಬಳಿಕ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾರ ಪಾದ ಸ್ಪರ್ಶಿಸಿದರು.

ನುಸ್ರತ್ ಬಾಸಿರ್‌ಹಟ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರೆ, ಮಿಮಿ ಜಾಧವಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ನುಸ್ರತ್ ತನ್ನ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಸಯನ್‌ತನ್ ಘೋಷ್‌ರನ್ನು 3,50,369 ಮತಗಳಿಂದಲೂ, ಮಿಮಿ ಚಕ್ರವರ್ತಿ ಬಿಜೆಪಿ ಅಭ್ಯರ್ಥಿ ಅನುಪಮ್ ಹಝ್ರಾರನ್ನು 2.9 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News