ಅಣು ಸ್ಥಾವರಗಳ ಬಗ್ಗೆ ಸರಕಾರ ಎಂದೂ ಸತ್ಯ ಹೇಳಿಲ್ಲ: ಕಮಲ್ ಹಾಸನ್

Update: 2019-06-29 18:27 GMT

ಚೆನ್ನೈ, ಜೂ.29: ಅಣುಸ್ಥಾವರಗಳ ವಿಷಯದಲ್ಲಿ ಸರಕಾರ ಎಂದೂ ಸತ್ಯವನ್ನು ಹೇಳಿಲ್ಲ ಎಂದು ಸಿನೆಮನಟ, ಮಕ್ಕಳ್ ನೀಧಿ ಮೈಯಂ ಪಕ್ಷದ ಅಧ್ಯಕ್ಷ ಕಮಲಹಾಸನ್ ಹೇಳಿದ್ದಾರೆ.

 ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಪ್ರಸ್ತಾವಿತ ‘ಅವೆ ಫ್ರಂ ರಿಯಾಕ್ಟರ್(ಎಎಫ್‌ಆರ್) ಸೌಲಭ್ಯದ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಕಮಲಹಾಸನ್, ಎಎಫ್‌ಆರ್ ಹೆಸರಲ್ಲಿರುವ ‘ಅವೆ’ (ದೂರ) ಎಂಬ ಪದ ಅಸ್ಪಷ್ಟವಾಗಿದೆ. ದೂರ ಎಂಬ ಪದಕ್ಕೆ ವಿವರಣೆ ನೀಡುವಂತೆ ಒತ್ತಾಯಿಸಿದ ಅವರು, ಐದು ಅಡಿಯನ್ನೂ ದೂರ ಎನ್ನಬಹುದು. ದೂರ ಶಬ್ದಕ್ಕೆ ವಿವರಣೆಯ ಅಗತ್ಯವಿದೆ. ಅಣು ಸ್ಥಾವರಗಳಿಗೆ ಸಂಬಂಧಿಸಿ ಸರಕಾರ ಎಂದೂ ಸತ್ಯವನ್ನು ಹೇಳಿಲ್ಲ. ಈಗಲಾದರೂ ಹೇಳಬೇಕು ಎಂದು ಹೇಳಿದ ಕಮಲಹಾಸನ್ ಫುಕುಶಿಮ ವಿಪತ್ತನ್ನು ಉದಾಹರಣೆಯಾಗಿ ನೀಡಿದರು.

ಕೂಡಂಕುಳಂ ಅಣುವಿದ್ಯುತ್ ಸ್ಥಾವರವನ್ನು ವಿರೋಧಿಸುತ್ತಿರುವ ತಮಿಳುನಾಡಿನ ಜನತೆ ಕೇಂದ್ರ ಸರಕಾರದ ದುರಹಂಕಾರದ ಬಲಿಪಶುಗಳಾಗಿದ್ದಾರೆ. ಸುರಕ್ಷತೆಯ ಭರವಸೆಯಿಲ್ಲದ ಯಾವುದೇ ತಂತ್ರಜ್ಞಾನ ಅಪಾಯಕಾರಿಯಾಗಿದೆ. ಈ ಬಗ್ಗೆ ತಮಿಳುನಾಡಿನ ಜನರು ಆತಂಕಿತರಾಗಿದ್ದಾರೆ. ಉಷ್ಣ ವಿದ್ಯುತ್ ಸ್ಥಾವರದಿಂದ ಹೊರಬೀಳುವ ತ್ಯಾಜ್ಯದ ಸಮಸ್ಯೆ ಜನರನ್ನು ಕಾಡಲಿದೆ ಎಂದು ಕಮಲಹಾಸನ್ ಹೇಳಿದರು.

ಎಲ್ಲಾ ಗ್ರಾಮಗಳೂ ಒಗ್ಗೂಡಿ ಒತ್ತಾಯಿಸಿದರೆ ಆಗ ಸರಕಾರದಿಂದ ಉತ್ತಮ ಆಡಳಿತವನ್ನು ನಿರೀಕ್ಷಿಸಬಹುದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News