ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ)ಮಸೂದೆ ರಾಜ್ಯಸಭೆಯಲ್ಲಿ ಮಂಡಿಸಿದ ಶಾ

Update: 2019-07-01 09:33 GMT

ಹೊಸದಿಲ್ಲಿ, ಜು.1: ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಸೋಮವಾರ ಜಮ್ಮು-ಕಾಶ್ಮೀರ ಮೀಸಲಾತಿ(ತಿದ್ದುಪಡಿ)ಮಸೂದೆಯನ್ನು ಮಂಡಿಸಿದರು.

  ಈ ಮಸೂದೆ ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿತ್ತು. ಈ ವೇಳೆ ನಡೆದ ತೀವ್ರ ಚರ್ಚೆಯಲ್ಲಿ ಶಾ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇತಿಹಾಸವನ್ನು ಕೆದಕಿದ ಶಾ ಜಮ್ಮು-ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ನ್ನು ತರಾಟೆ ತೆಗೆದುಕೊಂಡಿದ್ದರು. ಆಗ ವಿಪಕ್ಷಗಳು ಗದ್ದಲ ನಡೆಸಿದ್ದವು.

‘‘ಜಮ್ಮು-ಕಾಶ್ಮೀರದಲ್ಲಿ ನಾಳೆ ಕೊನೆಯಾಗಲಿರುವ ರಾಷ್ಟ್ರಪತಿ ಆಡಳಿತವನ್ನು ಇನ್ನೂ ಆರು ತಿಂಗಳು ವಿಸ್ತರಿಸಲು ನಾನು ಪ್ರಸ್ತಾವ ಸಲ್ಲಿಸಿದ್ದೇನೆ’’ ಎಂದು ರಾಜ್ಯಸಭೆಗೆ ಅಮಿತ್ ಶಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News