ಐಎಂಎ ವಂಚನೆ ಪ್ರಕರಣ: 40 ಲಕ್ಷ ರೂ. ಮೌಲ್ಯದ ಔಷಧಿ ಜಪ್ತಿ

Update: 2019-07-03 13:42 GMT

ಬೆಂಗಳೂರು, ಜು.3: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಟ್ ತನಿಖಾಧಿಕಾರಿಗಳು ದಾಳಿ ಮುಂದುವರೆಸಿದ್ದು, ನಗರದ ಎರಡು ಮಳಿಗೆಗಳಲ್ಲಿ ಶೋಧ ನಡೆಸಿ, 60 ಸಾವಿರ ರೂ. ನಗದು ಸೇರಿ 40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಐಎಂಎ ಸಮೂಹ ಸಂಸ್ಥೆಗಳ ಒಡೆತನದ ಇಲ್ಲಿನ ನೀಲಸಂದ್ರ, ವಿಜಯನಗರದಲ್ಲಿದ್ದ ಫ್ರಂಟ್‌ಲೈನ್ ಫಾರ್ಮಾ ಎಂಬ ಹೆಸರಿನ ಔಷಧಾಲಯಗಳ ಮೇಲೆ ಡಿವೈಎಸ್ಪಿ ಅನಿಲ್ ಭೂಮಿರೆಡ್ಡಿ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಲಾಯಿತು.

ಈ ಸಂದರ್ಭದಲ್ಲಿ 40 ಲಕ್ಷ ಮೌಲ್ಯದ ಔಷಧಿಗಳು, ವಿದ್ಯುನ್ಮಾನ ಉಪಕರಣ ಹಾಗೂ 40 ಸಾವಿರ ರೂ. ನಗದು ಜಪ್ತಿ ಮಾಡಿ, ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ಸಿಟ್ ತನಿಖಾಧಿಕಾರಿಗಳು ತಿಳಿಸಿದ್ದಾರೆ.

8 ದಿನ ನ್ಯಾಯಾಂಗ ಬಂಧನ

ಐಎಂಎ ವಂಚನೆ ಪ್ರಕರಣ ಸಂಬಂಧ ಬಿಡಿಎ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ.ಡಿ.ಕುಮಾರ್‌ನನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ 8 ದಿನಗಳ ಕಾಲ ಕಸ್ಟಡಿಗೆ ಸಿಟ್ ತನಿಖಾಧಿಕಾರಿಗಳು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News