ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಪ್ರಾಚೀನ ನಗರ ಬೆಬಿಲೋನ್

Update: 2019-07-06 16:58 GMT

ಬೆಬಿಲೋನ್ (ಇರಾಕ್), ಜು. 6: ಕ್ರಿಸ್ತಪೂರ್ವ 23ನೇ ಶತಮಾನದ ಮಣ್ಣಿನ ಸ್ಲೇಟೊಂದರಲ್ಲಿ ಮೊದಲ ಪ್ರಸ್ತಾವವಿರುವ ಪ್ರಾಚೀನ ನಗರ ಬೆಬಿಲೋನ್‌ನ್ನು ಶುಕ್ರವಾರ ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ.

ಬೆಬಿಲೋನ್ ನಗರ ಈಗ ಇರಾಕ್‌ನಲ್ಲಿದೆ.

ಅಝರ್‌ ಬೈಜಾನ್ ದೇಶದ ರಾಜಧಾನಿ ಬಾಕು ಎಂಬಲ್ಲಿ ಶುಕ್ರವಾರ ನಡೆದ ಯುನೆಸ್ಕೊ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಈ ಸಂಬಂಧ ಮತದಾನ ನಡೆಯಿತು. ಇದಕ್ಕಾಗಿ ಇರಾಕ್ ದಶಕಗಳಿಂದ ಲಾಬಿ ನಡೆಸಿತ್ತು.

ಇದರೊಂದಿಗೆ ಯೂಫ್ರಟಿಸ್ ನದಿಯ ದಡದಲ್ಲಿರುವ ಪ್ರಾಚೀನ ಮೆಸೊಪೊಟೇಮಿಯ ನಗರ (ಬೆಬಿಲೋನ್)ವು ಇರಾಕ್‌ನ ಆರನೇ ವಿಶ್ವ ಪಾರಂಪರಿಕ ತಾಣವಾಗಿ ದಾಖಲಾಗಿದೆ.

‘ತೂಗುವ ಉದ್ಯಾನ’ 7 ಅದ್ಭುತಗಳಲ್ಲಿ ಒಂದು

 ಇರಾಕ್ ರಾಜಧಾನಿ ಬಗ್ದಾದ್‌ನ ದಕ್ಷಿಣಕ್ಕೆ ಸುಮಾರು 85 ಕಿ.ಮೀ. ದೂರದಲ್ಲಿರುವ ಬೆಬಿಲೋನ್ ಒಂದು ಕಾಲದಲ್ಲಿ ವಿಶಾಲ ಸಾಮ್ರಾಜ್ಯವೊಂದರ ಕೇಂದ್ರವಾಗಿತ್ತು. ಗೋಪುರಗಳು ಮತ್ತು ಮಣ್ಣಿನ ಇಟ್ಟಿಗೆಯ ದೇವಾಲಯಗಳಿಗೆ ಅದು ಪ್ರಸಿದ್ಧವಾಗಿದೆ.

ದೊರೆ ಎರಡನೇ ನೆಬುಚಡ್ನೆಝಾರ್ ಸ್ಥಾಪಿಸಿದ ‘ತೂಗುವ ಉದ್ಯಾನ’ ಪ್ರಾಚೀನ ಜಗತ್ತಿನ ಏಳು ವಿಸ್ಮಯಗಳಲ್ಲಿ ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News