ಗ್ರಾಹಕರ ರಕ್ಷಣೆ ಕಾಯ್ದೆ ಲೋಕಸಭೆಯಲ್ಲಿ ಮಂಡನೆ

Update: 2019-07-08 16:00 GMT

ಹೊಸದಿಲ್ಲಿ, ಜು.8: ಗ್ರಾಹಕರ ಹಕ್ಕುಗಳನ್ನು ಬಲಪಡಿಸುವ ಮತ್ತು ವಸ್ತುಗಳಲ್ಲಿ ದೋಷ ಮತ್ತು ಸೇವೆಗಳಲ್ಲಿ ಕೊರತೆಯ ಕುರಿತ ದೂರುಗಳನ್ನು ಬಗೆಹರಿಸಲು ಸಾಧನವನ್ನು ಒದಗಿಸುವ ಉದ್ದೇಶದಿಂದ ಗ್ರಾಹಕರ ರಕ್ಷಣೆ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಪರಿಚಯಿಸಲಾಯಿತು.

ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಂಡಿಸಿದ ಮಸೂದೆಯು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲಿದೆ ಮತ್ತು ಗ್ರಾಹಕರ ದೂರುಗಳ ಪರಿಹಾರ ಮತ್ತು ಸಮಯೋಚಿತ ಹಾಗೂ ಪರಿಣಾಮಕಾರಿ ಆಡಳಿತ ನಡೆಸಲು ಪ್ರಾಧಿಕಾರವನ್ನು ರಚಿಸಲಿದೆ. ಈ ಮಸೂದೆಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿದ್ದರೂ ರಾಜ್ಯ ಸಭೆಯಲ್ಲಿ ಅಂಗೀಕಾರಗೊಳ್ಳದ ಕಾರಣ ರದ್ದುಗೊಂಡಿತ್ತು. ಗ್ರಾಹಕರ ರಕ್ಷಣೆ ಕಾಯ್ದೆ, 1986ಗೆ ಬದಲಾಗಿ ಈ ಮಸೂದೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News