ಟ್ರಂಪ್ ‘ಅಸಮರ್ಥ’, ಶ್ವೇತಭವನ ‘ನಿಷ್ಕ್ರಿಯ: ಅಮೆರಿಕಕ್ಕೆ ಬ್ರಿಟನ್ ರಾಯಭಾರಿ

Update: 2019-07-09 05:28 GMT

ಲಂಡನ್, ಜು. 8: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಅಸಮರ್ಥ’ ಹಾಗೂ ಅವರ ಶ್ವೇತಭವನ ‘ನಿಷ್ಕ್ರಿಯವಾಗಿದೆ’ ಎಂಬ ಅಮೆರಿಕಕ್ಕೆ ಬ್ರಿಟನ್ ರಾಯಭಾರಿಯ ಹೇಳಿಕೆ ಬಗ್ಗೆ ಟ್ರಂಪ್ ರವಿವಾರ ಕಿಡಿಕಾರಿದ್ದಾರೆ ಹಾಗೂ ಈ ಬಗ್ಗೆ ಬ್ರಿಟನ್ ತನಿಖೆಗೆ ಆದೇಶಿಸಿದೆ.

ಟ್ರಂಪ್ ಸರಕಾರ ‘ಢಿಕ್ಕಿ ಹೊಡೆದು ಉರಿದುಹೋಗಬಹುದು’ ಹಾಗೂ ‘ಅಪಮಾನದೊಂದಿಗೆ ಕೊನೆಗೊಳ್ಳಬಹುದು’ ಎಂಬ ಅಭಿಪ್ರಾಯದ ರಹಸ್ಯ ಸಂದೇಶಗಳನ್ನು ಬ್ರಿಟನ್ ರಾಯಭಾರಿ ಕಿಮ್ ಡರೋಚ್ ಬ್ರಿಟನ್‌ಗೆ ಕಳುಹಿಸಿದ್ದಾರೆ ಹಾಗೂ ಇದನ್ನು ‘ಮೇಲ್ ಆನ್ ಸಂಡೇ’ ಪತ್ರಿಕೆ ನೋಡಿದೆ.

ರಾಯಭಾರಿ ಕಿಮ್ ಡರೋಚ್ ಬ್ರಿಟನ್‌ಗೆ ಸರಿಯಾದ ಸೇವೆಯನ್ನು ನೀಡಿಲ್ಲ ಹಾಗೂ ತಾನು ಮತ್ತು ತನ್ನ ಆಡಳಿತ ಬ್ರಿಟನ್ ರಾಯಭಾರಿಯ ಅಭಿಮಾನಿಗಳೂ ಅಲ್ಲ ಎಂಬುದಾಗಿ ಟ್ರಂಪ್ ಹೇಳಿದ್ದಾರೆ.

‘‘ಈ ಸರಕಾರವು ಇದಕ್ಕಿಂತ ತುಂಬಾ ಹೆಚ್ಚು ಸಾಮಾನ್ಯ ಸ್ಥಿತಿಗೆ, ಕಡಿಮೆ ನಿಷ್ಕ್ರಿಯತೆಗೆ, ಕಡಿಮೆ ಅನಿಶ್ಚಿತತೆಗೆ ಹೋಗುತ್ತದೆ ಎಂಬುದಾಗಿ ನಾವೇನೂ ಭಾವಿಸುವುದಿಲ್ಲ’’ ಎಂಬುದಾಗಿ ಒಂದು ಪತ್ರದಲ್ಲಿ ಡರೋಚ್ ಬರೆದಿದ್ದಾರೆ.

ಅದೂ ಅಲ್ಲದೆ, ಡರೋಚ್, ಟ್ರಂಪ್‌ರನ್ನು ‘ಅಭ್ರದ್ರ’ ಹಾಗೂ ‘ಅಸಮರ್ಥ’ ಎಂಬುದಾಗಿಯೂ ಕರೆದಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಜೂನ್ ತಿಂಗಳಲ್ಲಿ ಟ್ರಂಪ್ ಬ್ರಿಟನ್ ಪ್ರವಾಸ ಕೈಗೊಂಡ ಬಳಿಕ ಬ್ರಿಟನ್ ರಾಯಭಾರಿ ಈ ಸಂದೇಶಗಳನ್ನು ತನ್ನ ದೇಶಕ್ಕೆ ಕಳುಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ‘‘ನಾನು ಕೂಡ ಅವರ ಬಗ್ಗೆ ಏನಾದರೂ ಹೇಳಬಹುದು. ಆದರೆ, ನಾನು ಹಾಗೆ ಮಾಡಲು ಹೋಗುವುದಿಲ್ಲ’’ ಎಂದಿದ್ದಾರೆ.

ಈ ಸೋರಿಕೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬ್ರಿಟನ್ ವಿದೇಶ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News