ಪ್ರಯಾಣಿಕರ ಬ್ಯಾಂಕ್ ವಿವರಗಳಿಗೆ ಕನ್ನ: ವಿಮಾನಯಾನ ಸಂಸ್ಥೆಗೆ 1,570 ಕೋಟಿ ರೂ. ದಂಡ

Update: 2019-07-09 03:14 GMT

ಲಂಡನ್, ಜು. 8: ಕಳೆದ ವರ್ಷ ಬ್ರಿಟಿಶ್ ಏರ್‌ವೇಸ್‌ನ ಲಕ್ಷಾಂತರ ಪ್ರಯಾಣಿಕರ ಬ್ಯಾಂಕ್ ಮಾಹಿತಿಗಳನ್ನು ಕಂಪ್ಯೂಟರ್ ಕನ್ನಗಾರರು ಕದ್ದ ಪ್ರಕರಣಕ್ಕೆ ಸಂಬಂಧಿಸಿ, ಬ್ರಿಟನ್‌ನ ದತ್ತಾಂಶ ಖಾಸಗಿ ನಿಗಾ ಸಂಸ್ಥೆ ಯುಕೆ ಇನ್‌ಫಾರ್ಮೇಶನ್ ಕಮಿಶನರ್ಸ್‌ ಆಫಿಸ್ (ಐಸಿಒ) ಬ್ರಿಟಿಶ್ ಏರ್‌ವೇಸ್‌ಗೆ 183 ಮಿಲಿಯ ಪೌಂಡ್ (ಸುಮಾರು 1,570 ಕೋಟಿ ರೂಪಾಯಿ) ದಂಡ ವಿಧಿಸಿದೆ.

ಐರೋಪ್ಯ ಒಕ್ಕೂಟ ದತ್ತಾಂಶ ರಕ್ಷಣಾ ನಿಯಮಗಳ ಉಲ್ಲಂಘನೆಗಾಗಿ 183 ಮಿಲಿಯ ಪೌಂಡ್ ದಂಡ ವಿಧಿಸುವ ನೋಟಿಸನ್ನು ಬ್ರಿಟಿಶ್ ಏರ್‌ವೇಸ್‌ಗೆ ನೀಡಿರುವುದಾಗಿ ಐಸಿಒ ಹೇಳಿದೆ.

‘‘ಜನರ ವೈಯಕ್ತಿಕ ದತ್ತಾಂಶ ವೈಯಕ್ತಿಕವಾಗಿದೆ’’ ಎಂದು ಮಾಹಿತಿ ಕಮಿಶನರ್ ಎಲಿಝಬೆತ್ ಡೆನ್ಹಮ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ದಂಡವು ಬ್ರಿಟಿಶ್ ಏರ್‌ವೇಸ್‌ನ 2017ರ ವ್ಯವಹಾರದ 1.5 ಶೇಕಡವಾಗಿದೆ ಎಂದು ಬ್ರಿಟಿಶ್ ಏರ್‌ವೇಸ್‌ನ ಮಾತೃ ಸಂಸ್ಥೆ ಐಎಜಿ ಪ್ರತ್ಯೇಕ ಹೇಳಿಕೆಯೊಂದರಲ್ಲಿ ತಿಳಿಸಿದೆ. ಹಾಗೂ ದಂಡವು ಐಎಜಿಯ ಕಳೆದ ವರ್ಷದ ನಿವ್ವಳ ಲಾಭದ 7 ಶೇಕಡಕ್ಕೂ ಅಧಿಕವಾಗಿದೆ.

2018ರ ಜೂನ್‌ನಿಂದ ಆರಂಭಿಸಿ ಸುಮಾರು 5 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿಗಳನ್ನು ಕದಿಯಲಾಗಿದೆ’’ ಎಂದು ಐಸಿಒ ಸೋಮವಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News