ಯುರೇನಿಯಂ ಸಂವರ್ಧನೆ ಮಿತಿ ಮೀರಿದ ಇರಾನ್

Update: 2019-07-09 03:19 GMT

ಜಿನೇವ, ಜು. 8: 2015ರ ಪರಮಾಣು ಒಪ್ಪಂದದಲ್ಲಿ ವಿಧಿಸಲಾಗಿರುವ 3.67 ಶೇಕಡ ಯುರೇನಿಯಂ ಸಂವರ್ಧನೆ ಮಿತಿಯನ್ನು ಇರಾನ್ ಮೀರಿದೆ ಹಾಗೂ ಅದು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಸಂವರ್ಧನೆ ನಡೆಸಬಹುದಾಗಿದೆ ಎಂದು ಇರಾನ್‌ನ ಪರಮಾಣು ಶಕ್ತಿ ಸಂಸ್ಥೆಯ ವಕ್ತಾರ ಬೆಹ್ರೂಝ್ ಕಮಲ್ವಂದಿ ಸೋಮವಾರ ಹೇಳಿದ್ದಾರೆ ಎಂದು ಐಆರ್‌ಐಬಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘‘ಈಗ 20 ಶೇಕಡ ಸಂವರ್ಧಿತ ಯುರೇನಿಯಂ ಬೇಕಾಗಿಲ್ಲ. ಆದರೆ, ನಮಗೆ ಬೇಕಾದರೆ ನಾವು ಅದನ್ನು ಉತ್ಪಾದಿಸುತ್ತೇವೆ. ನಾವು 3.67 ಶೇಕಡ ಮಿತಿಯನ್ನು ಮೀರಿದಾಗ ನಮಗೆ ಯಾವುದೇ ಸಮಸ್ಯೆ ಎದುರಾಗಲಿಲ್ಲ’’ ಎಂದು ಅವರು ನುಡಿದರು.

‘‘ಈಗ ನಮ್ಮೆದುರು 20 ಶೇಕಡ ಸಂವರ್ಧನೆಯ ಆಯ್ಕೆಯಿದೆ ಹಾಗೂ ಅದಕ್ಕಿಂತಲೂ ಹೆಚ್ಚಿನ ಸಾಂದ್ರ ಯುರೇನಿಯಂನ ಆಯ್ಕೆಯೂ ಇದೆ. ಎದುರಾಳಿಯನ್ನು ಹೆದರಿಸುವುದಕ್ಕಾಗಿ ನಾವು ಏನನ್ನೂ ಮಾಡುವುದಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News