ಗ್ರೀಸ್: ಹಾಲಿ ಪ್ರಧಾನಿ ಪಕ್ಷಕ್ಕೆ ಸೋಲು; ನೂತನ ಪ್ರಧಾನಿಯಾಗಿ ಕಿರಿಯಕೊಸ್ ಮಿಟ್ಸೊಟಕಿಸ್

Update: 2019-07-09 03:22 GMT

ಅಥೆನ್ಸ್ (ಗ್ರೀಸ್), ಜು. 8: ಗ್ರೀಸ್‌ನಲ್ಲಿ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪ್ರತಿಪಕ್ಷ ನ್ಯೂ ಡೆಮಾಕ್ರಸಿ, ಪ್ರಧಾನಿ ಅಲೆಕ್ಸಿಸ್ ಸಿಪ್ರಾಸ್‌ರ ಎಡಪಂಥೀಯ ಪಕ್ಷದ ವಿರುದ್ಧ ಜಯ ಗಳಿಸಿದೆ.

ನ್ಯೂ ಡೆಮಾಕ್ರಸಿ ಪಕ್ಷದ ನಾಯಕ ಕಿರಿಯಕೊಸ್ ಮಿಟ್ಸೊಟಕಿಸ್ ಸೋಮವಾರ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಗ್ರೀಸ್ ಐರೋಪ್ಯ ಸಾಲ ಬಿಕ್ಕಟ್ಟಿನ ಉತ್ತುಂಗದಲ್ಲಿದ್ದಾಗ ಅಂತರ್‌ರಾಷ್ಟ್ರೀಯ ಸಾಲದಾತರಿಂದ ಸಾಲ ಪಡೆದು ದೇಶದ ಆರ್ಥಿಕತೆಯನ್ನು ಮತ್ತೆ ಹಳಿಗೆ ತರುವ ಪ್ರಕ್ರಿಯೆಯ ನೇತೃತ್ವ ವಹಿಸಿದ್ದರು.

ಸಿಪ್ರಾಸ್‌ರ ಎಡಪಂಥೀಯ ಸೈರಿಝ ಪಕ್ಷವು 31 ಶೇಕಡ ಮತಗಳನ್ನು ಪಡೆದರೆ, ನ್ಯೂ ಡೆಮಾಕ್ರಸಿ ಪಕ್ಷವು 40 ಶೇಕಡ ಮತಗಳನ್ನು ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News