ಈ ವ್ಯಕ್ತಿಗೆ ಮನೆಗಿಂತ ಜೈಲೇ ಇಷ್ಟ !

Update: 2019-07-12 04:02 GMT

ಚೆನ್ನೈ: ದಿನಕ್ಕೆ ಮೂರು ಹೊತ್ತು ಊಟ, ವಸತಿ ವ್ಯವಸ್ಥೆ ಮತ್ತು ಹೊಂದಿಕೆ; ಜ್ಞಾನಪ್ರಕಾಶಂ (52) ಎಂಬ ಕೈದಿಗೆ ಮನೆಗಿಂತ ಜೈಲೇ ಉತ್ತಮ ಎನಿಸಲು ಇಷ್ಟು ಸಾಕಾಗಿತ್ತು.

ಕಳ್ಳತನ ಪ್ರಕರಣದಲ್ಲಿ ಜಾಮೀನು ಸಿಕ್ಕಿದರೂ ಈ ಕೈದಿಗೆ ಜೈಲು ವ್ಯಾಮೋಹದಿಂದಾಗಿ ಮನೆಗೆ ಹೋಗಲು ಮನಸ್ಸಾಗಲಿಲ್ಲ; ಮತ್ತೆ ಜೈಲಿಗೆ ಬರಲೇಬೇಕು ಎಂಬ ಕಾರಣಕ್ಕೆ ಬೈಕ್ ಕದ್ದು, ತನ್ನ ಬಂಧನಕ್ಕಾಗಿ ಕಾಯುತ್ತಿದ್ದ !

ಜೈಲಿನ ಊಟ ಆತನಿಗೆ ಎಲ್ಲಕ್ಕಿಂತ ಇಷ್ಟ ಎಂದು ಎಸಿಪಿ ಪಿ.ಅಶೋಕನ್ ಹೇಳುತ್ತಾರೆ. ಮನೆಯಲ್ಲಿ ಆತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ಕಾರಣಕ್ಕಾಗಿ ಆತ ಮನೆಯಲ್ಲಿ ಖುಷಿಯಾಗಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

"ಜೈಲುವಾಸವನ್ನು ಇಷ್ಟಪಡುತ್ತಿದ್ದೇನೆ. ಸಮಯಕ್ಕೆ ಸರಿಯಾಗಿ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯೂಟ ಸಿಗುತ್ತದೆ" ಎಂದು ಆತ ಹೇಳಿದ್ದಾಗಿ ಪೊಲೀಸರು ವಿವರಿಸುತ್ತಾರೆ.

ಮನೆಯಲ್ಲಿ ಕರೆಯುವಂತೆ ಯಾರೂ ಜೈಲಲ್ಲಿ ತನ್ನನ್ನು ಸೋಮಾರಿ ಎಂದು ಕರೆಯುವುದಿಲ್ಲ ಎಂಬ ಖುಷಿ ಆತನಿಗಿದೆ. ಜೈಲಿನಲ್ಲಿ ಕೆಲ ಒಳ್ಳೆಯ ಸ್ನೇಹಿತರನ್ನೂ ಮಾಡಿಕೊಂಡಿದ್ದಾಗಿ ಆತ ಹೇಳಿದ್ದಾನೆ ಎಂದು ಅಶೋಕನ್ ವಿವರಿಸುತ್ತಾರೆ.

ಪೊಲೀಸರಿಗೆ ಹಾಗೂ ಆತನಿಗೆ ಖುಷಿಯ ವಿಚಾರವೆಂದರೆ, ಆತ ಇದೀಗ ಜೈಲಿನಲ್ಲಿದ್ದಾನೆ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News