ದುಬೈನಿಂದ ಇಂದೋರ್, ಕೋಲ್ಕತಾಕ್ಕೆ ಏರ್ ಇಂಡಿಯಾ ನೇರ ವಿಮಾನ

Update: 2019-07-13 18:47 GMT

ದುಬೈ, ಜು. 13: ದುಬೈಯಿಂದ ಇಂದೋರ್ ಮತ್ತು ಕೋಲ್ಕತಾ ನಗರಗಳಿಗೆ ನೇರ ಹಾಗೂ ನಿಲುಗಡೆರಹಿತ ವಿಮಾನ ಸೇವೆಗಳನ್ನು ಆರಂಭಿಸಿರುವುದಾಗಿ ಏರ್ ಇಂಡಿಯಾ ಶುಕ್ರವಾರ ಘೋಷಿಸಿದೆ.

ಭಾರತೀಯ ವಿಮಾನ ಯಾನ ಸಂಸ್ಥೆಯು ಟ್ವಿಟರ್‌ನಲ್ಲಿ ಈ ಘೋಷಣೆಯನ್ನು ಮಾಡಿದೆ.

 ಗೂಗಲ್ ಫ್ಲೈಟ್ಸ್ ಪ್ರಕಾರ, ದುಬೈ-ಇಂದೋರ್ ವಿಮಾನ ಯಾನಕ್ಕೆ ಸುಮಾರು 4 ಗಂಟೆ ತಗಲುತ್ತದೆ. ಹೋಗಿ ಬರುವ ಪ್ರಯಾಣಕ್ಕೆ ಸುಮಾರು 1,100 (20,532 ರೂಪಾಯಿ-1,200 ದಿರ್ಹಮ್ (ಸುಮಾರು 22,400 ರೂಪಾಯಿ) ವೆಚ್ಚ ತಗಲುತ್ತದೆ.

ಅದೇ ವೇಳೆ, ದುಬೈ-ಕೋಲ್ಕತಾ ಪ್ರಯಾಣಕ್ಕೆ ಸುಮಾರು 4 ಗಂಟೆ 35 ನಿಮಿಷ ಬೇಕಾಗುತ್ತದೆ ಹಾಗೂ ಹೋಗಿಬರುವ ಟಿಕೆಟ್ ವೆಚ್ಚವು ಸುಮಾರು 1,200 (ಸುಮಾರು 22,400 ರೂಪಾಯಿ) ದಿರ್ಹಮ್ ಆಗಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News