ಐಎಂಎ ವಂಚನೆ ಪ್ರಕರಣ: ಜು.19ಕ್ಕೆ ರೋಷನ್ ಬೇಗ್ ವಿಚಾರಣೆ

Update: 2019-07-15 14:28 GMT

ಬೆಂಗಳೂರು, ಜು.15: ಐಎಂಎ ವಂಚನೆ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸತತ ಎರಡನೆ ಬಾರಿಗೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರಿಗೆ ಸಿಟ್(ಎಸ್‌ಐಟಿ) ನೋಟಿಸ್ ನೀಡಿದೆ.

ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ಸಿಟ್ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ಇದಕ್ಕೆ ಸ್ಪಂದಿಸದ ರೋಷನ್ ಬೇಗ್ ವಿಚಾರಣೆಗೆ ಗೈರಾಗಿದ್ದಾರೆ.

ಸೋಮವಾರ ಸಿಟ್ ಕಚೇರಿಗೆ ರೋಷನ್ ಬೇಗ್ ಆಪ್ತ ಸಹಾಯಕರೊಬ್ಬರು ಭೇಟಿ ನೀಡಿ, ಹುಟ್ಟುಹಬ್ಬ, ಹಜ್‌ಯಾತ್ರೆ, ವಿಧಾನಸಭೆ ಬೆಳವಣಿಗೆ ಇದೆ. ಹೀಗಾಗಿ, ಶಾಸಕರು ಜು.25 ರಂದು ವಿಚಾರಣೆಗೆ ಹಾಜರಾಗುತ್ತಾರೆ ಎಂದು ಮನವಿ ಮಾಡಿದ್ದಾರೆ. ಆದರೆ, ಸಿಟ್ ತನಿಖಾಧಿಕಾರಿಗಳು ಜು.19ಕ್ಕೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್, ರೋಷನ್ ಬೇಗ್‌ಗೆ ಹಣ ನೀಡಿರುವುದಾಗಿ ಆರೋಪಿಸಿ, ಧ್ವನಿ ಸುರುಳಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದರ ಅನ್ವಯ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ರೋಷನ್ ಬೇಗ್‌ಗೆ ನೋಟಿಸ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News