ಸಿಇಟಿ-2019: ಯುಜಿಸಿಇಟಿ ಎರಡನೆ ಸುತ್ತಿನ ಸೀಟು ಹಂಚಿಕೆ

Update: 2019-07-15 14:49 GMT

ಬೆಂಗಳೂರು, ಜು.15: ಸರಕಾರವು ಆಯುಷ್ ಕೋರ್ಸುಗಳಿಗೆ(ಆಯುರ್ವೇದ, ಯೋಗ-ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿ ಸೀಟುಗಳು) ಸೀಟ್ ಮ್ಯಾಟ್ರಿಕ್ಸ್ ಅನ್ನು ನೀಡಿರುತ್ತದೆ. ಸದರಿ ಸೀಟುಗಳನ್ನು ಯುಜಿಸಿಇಟಿ-ಎರಡನೆ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು.

ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನೀಟ್ ರೋಲ್ ನಂಬರ್ ಅನ್ನು ನಮೂದಿಸಿ, ಯುಜಿಸಿಇಟಿ ಅಥವಾ ಯುಜಿನೀಟ್‌ರಲ್ಲಿ ದಾಖಲಾತಿ ಪರಿಶೀಲನೆ ಮಾಡಿಕೊಂಡಿರುವವರು ಆಯುಷ್ ಕೋರ್ಸುಗಳಿಗೆ ಮತ್ತೊಮ್ಮೆ ದಾಖಲಾತಿ ಪರಿಶೀಲನೆಗೆ ಹಾಜರಾಗುವ ಅಗತ್ಯವಿರುವುದಿಲ್ಲ. ಆದರೆ, ಆಯುಷ್ ಕೋರ್ಸುಗಳಿಗೆ Verification Slip ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ ನೀಟ್ ರೋಲ್ ನಂಬರ್ ಅನ್ನು ನಮೂದಿಸಿ ದಾಖಲಾತಿ ಪರಿಶೀಲನೆಯನ್ನು ಮಾಡಿಕೊಳ್ಳದೇ ಇರುವ ಅರ್ಹ ಕರ್ನಾಟಕ ಅಭ್ಯರ್ಥಿಗಳು ನೀಟ್ ಸ್ಕೋರ್ ಕಾರ್ಡ್ ಹಾಗೂ ಇತರೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಆಯುಷ್ ಕೋರ್ಸುಗಳ ಪ್ರವೇಶಾತಿಗೆ ದಾಖಲಾತಿ ಪರಿಶೀಲನೆಗೆ ಯಾವುದಾದರೂ ಸಹಾಯಕ ಕೇಂದ್ರದಲ್ಲಿ ಹಾಜರಾಗಬೇಕು( ಜು.17 ಮತ್ತು 18).

ಇಂಜಿನಿಯರಿಂಗ್, ಕೃಷಿ ವಿಜ್ಞಾನ ಇತರೆ ಕೋರ್ಸಿಗೆ(ಯುಜಿಸಿಇಟಿ-2019) ಸಹ ದಾಖಲಾತಿ ಪರಿಶೀಲನೆಯನ್ನು ಮಾಡಿಕೊಳ್ಳದೇ ಇರುವ ಅರ್ಹ ಕರ್ನಾಟಕ ಅಭ್ಯರ್ಥಿಗಳು ಎಲ್ಲ ಮೂಲ ದಾಖಲಾತಿಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬಹುದಾಗಿದೆ.

ಎರಡನೆ ಸುತ್ತಿನ ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಆಯುರ್ವೇದ, ಯೋಗ-ನ್ಯಾಚುರೋಪತಿ, ಯುನಾನಿ, ಹೋಮಿಯೋಪತಿ ಮುಂತಾದ ಕೋರ್ಸುಗಳಿಗೆ ಇಚ್ಛೆ, ಆಯ್ಕೆಗಳನ್ನು ದಾಖಲಿಸುವ ಪ್ರಕ್ರಿಯೆ ವೇಳಾಪಟ್ಟಿಯಂತೆ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳು ಇಚ್ಛೆ, ಆಯ್ಕೆಗಳನ್ನು ದಾಖಲಿಸಬಹುದಾಗಿದೆ. ಸೀಟ್ ಮ್ಯಾಟ್ರಿಕ್ಸ್ ಅನ್ನು ವೆಬ್‌ಸೈಟ್ http://kea.kar.nic.in ನಲ್ಲಿ ಪ್ರಕಟಿಸಲಾಗಿದೆ ಎಂದು ರಾಜ್ಯ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News