ಬೈಕ್ ಅಪಘಾತ: ಸಿನೆಮಾ ವಿತರಕ ಮೃತ್ಯು

Update: 2019-07-15 15:53 GMT

ಬೆಂಗಳೂರು, ಜು.15: ಶರವೇಗವಾಗಿ ಸಾಗುತ್ತಿದ್ದ ಸ್ಪೋರ್ಟ್ಸ್ ಬೈಕ್ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ, ಸಿನೆಮಾ ವಿತರಕ ಮೃತಪಟ್ಟಿರುವ ಘಟನೆ ಇಲ್ಲಿನ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಜಯ್ ಚಂದಾನಿ(48) ಎಂಬುವರು ಮೃತ ಸಿನಿಮಾ ವಿತರಕ ಎಂದು ಪೊಲೀಸರು ಗುರುತಿಸಿದ್ದು, ಇವರು ವಸಂತನಗರದ ಅಬ್ಯೂಟ್ ಲೇಔಟ್‌ನ ನಿವಾಸಿಯಾಗಿದ್ದರು

ರವಿವಾರ ಸಂಜೆ 6:30ಕ್ಕೆ ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ತಮ್ಮ ಸುಮಾರು ದುಬಾರಿ ಬೆಲೆಯ ಬೈಕಿನಲ್ಲಿ ಮನೆಯಿಂದ ಹೊರಗಡೆ ಹೊರಟ್ಟಿದ್ದರು. ಬೈಕ್ ಅನ್ನು ಅತಿ ವೇಗದಲ್ಲಿ ಚಾಲನೆ ಮಾಡುತ್ತಿದ್ದ ಪರಿಣಾಮ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಸಂಚಾರ ಪೊಲೀಸರು ಅಳವಡಿಸಿದ್ದ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆದಿದ್ದಾರೆ. ಬಳಿಕ ಅಲ್ಲೇ ಸಮೀಪದಲ್ಲಿದ್ದ ಹೂಡಿ ಅಪಾರ್ಟ್‌ಮೆಂಟ್‌ನ ತಡೆಗೋಡೆಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಅಜಯ್ ಚಂದಾನಿ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಜಯ್ ಚಂದಾನಿ ಬೆಂಗಳೂರಿನಲ್ಲಿ ಅತಿದೊಡ್ಡ ಹಿಂದಿ ಚಲನಚಿತ್ರ ವಿತರಕರಲ್ಲಿ ಒಬ್ಬರಾಗಿದ್ದ ದಿವಂಗತ ಪಾಲ್ ಚಂದಾನಿ ಅವರ ಪುತ್ರನಾಗಿದ್ದು, ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. ಕರ್ನಾಟಕದಲ್ಲಿ ಹಿಂದಿ ಚಲಚಚಿತ್ರಗಳ ಪ್ರಮುಖ ವಿತರಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News