ಶಾಸಕ ರೋಷನ್ ಬೇಗ್ ಎಸ್ಐಟಿ ವಶಕ್ಕೆ

Update: 2019-07-15 18:38 GMT

ಬೆಂಗಳೂರು, ಜು.15: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶಿವಾಜಿನಗರ ಶಾಸಕ ಆರ್.ರೋಷನ್ ಬೇಗ್ ಅನ್ನು ಸಿಟ್(ಎಸ್ಐಟಿ) ವಶಕ್ಕೆ ಪಡೆದಿದೆ.

ಸೋಮವಾರ ರಾತ್ರಿ 10:30 ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಟ್ ತನಿಖಾಧಿಕಾರಗಳು ಕಾರ್ಯಾಚರಣೆ ನಡೆಸಿ, ರೋಷನ್ ಬೇಗ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್, 24 ಗಂಟೆಯೊಳಗೆ ಭಾರತಕ್ಕೆ ವಾಪಸ್ಸು ಬರುವುದಾಗಿ ವಿಡಿಯೋ ಮೂಲಕ ಸಂದೇಶಯೊಂದನ್ನು ರವಾನಿಸಿದ್ದ. ತದನಂತರ ರೋಷನ್ ಬೇಗ್, ಗೌಪ್ಯ ಸ್ಥಳಕ್ಕೆ ತೆರಳಲು ಮುಂದಾಗಿರುವ ಬಗ್ಗೆ ಮಾಹಿತಿ ಆಧಾರಿಸಿ, ಸಿಟ್ ಅವರನ್ನು ವಶಕ್ಕೆ ಪಡೆದಿದೆ.

ಸದ್ಯಕ್ಕೆ, ರೋಷನ್ ಬೇಗ್ ಅನ್ನು ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ ಬಳಿಕ ಹೆಚ್ಚಿನ‌ ಮಾಹಿತಿ ನೀಡುವುದಾಗಿ ಸಿಟ್ ಪ್ರಮುಖ ಅಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.

ಜನ್ಮ ದಿನದಂದೇ ಬಂಧನ
ಜು.15ರಂದು ರೋಷನ್ ಬೇಗ್ ಅವರು ಜನ್ಮ ದಿನವಾಗಿತ್ತು. ಇದೇ ದಿನವೇ ಸಿಟ್ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದೆ.

READ IN ENGLISH: http://english.varthabharati.in/karnataka/ima-multi-crore-scam-mla-roshan-baig-arrested

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News