ಭಾರತೀಯ ನಾಗರಿಕ ವಿಮಾನಗಳಿಗೆ ತನ್ನ ವಾಯು ಮಾರ್ಗವನ್ನು ತೆರೆದ ಪಾಕಿಸ್ತಾನ

Update: 2019-07-16 07:12 GMT

ಇಸ್ಲಾಮಾಬಾದ್, ಜು.16: ಫೆಬ್ರವರಿಯಲ್ಲಿ ಭಾರತೀಯ ವಾಯು ಪಡೆ ನಡೆಸಿದ ಬಾಲಾಕೋಟ್ ವಾಯು ದಾಳಿಯ ನಂತರ ಪಾಕಿಸ್ತಾನ ಎಲ್ಲಾ ನಾಗರಿಕ ವಿಮಾನಗಳಿಗೆ ಮುಚ್ಚಿದ್ದ ತನ್ನ ವಾಯುಮಾರ್ಗವನ್ನು ಮರು ತೆರೆದಿರುವುದಾಗಿ ಹೇಳಿದೆ.

ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ ತನ್ನ ನೋಟಿಸ್ ಟು ಏರ್ ಮೆನ್ ಅನ್ನು ಮಂಗಳವಾರ ಮುಂಜಾನೆ 12:38ಕ್ಕೆ ರದ್ದುಪಡಿಸಿದೆ. ಇದರಿಂದ ಎಲ್ಳಾ ವಿಮಾನಗಳೂ ಪಾಕ್ ವಾಯು ಮಾರ್ಗದಲ್ಲಿ ಎಂದಿನಂತೆ ಹಾರಾಟ ನಡೆಸಬಹುದಾಗಿದೆ.

ಮಾರ್ಚ್ ತಿಂಗಳಲ್ಲಿ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಭಾಗಶಃ ತೆರೆದಿದ್ದರೂ ಭಾರತೀಯ ವಿಮಾನಗಳ ಹಾರಾಟಕ್ಕೆ ಅನುಮತಿಸಿರಲಿಲ್ಲ. ಆದರೆ ಮಧ್ಯ ಎಪ್ರಿಲ್ ತಿಂಗಳಲ್ಲಿ ಪಶ್ಚಿಮ ದೇಶಗಳಿಗೆ ಭಾರತದಿಂದ ಹೊರಟ ವಿಮಾನಗಳಿಗೆ ತನ್ನ 11 ವಾಯು ಮಾರ್ಗಗಳಲ್ಲಿ ಒಂದನ್ನು ಪಾಕ್ ತೆರೆದ ನಂತರ ಏರ್ ಇಂಡಿಯಾ ಹಾಗೂ ಟರ್ಕಿಶ್ ಏರ್ ಲೈನ್ಸ್ ಅದನ್ನು ಬಳಸಲು ಆರಂಭಿಸಿದ್ದವು.

ಪಾಕಿಸ್ತಾನ ತನ್ನ ವಾಯುಮಾರ್ಗ ಬಂದ್ ಮಾಡಿದ್ದರಿಂದ ಮುಖ್ಯವಾಗಿ ಯುರೋಪ್ ಮತ್ತು ಆಗ್ನೇಯ ಏಶ್ಯ ದೇಶಗಳ ವಿಮಾನಗಳು ಬಾಧಿತವಾಗಿದ್ದವಲ್ಲದೆ ವಿಮಾನಗಳ ಹಾರಾಟಕ್ಕೆ ಹೆಚ್ಚಿನ ಸಮಯದ ಜತೆಗೆ ಇಂಧನಕ್ಕಾಗಿಯೂ ಹೆಚ್ಚಿನ ವೆಚ್ಚ ಮಾಡಬೇಕಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News