ಸುಪ್ರೀಂ ಕೋರ್ಟ್ ಅತೃಪ್ತ ಶಾಸಕರ ಅರ್ಜಿಯನ್ನು ಮಾನ್ಯ ಮಾಡಬಾರದು : ವಕೀಲ ಧವನ್

Update: 2019-07-16 09:43 GMT

ಹೊಸದಿಲ್ಲಿ, ಜು.16:   ರಾಜೀನಾಮೆ ಅಂಗೀಕಾರವಾದ್ರೆ ಸಚಿವರಾಗ್ತಾರೆ. ಶಾಸಕರ ಉದ್ದೇಶ ಪರಿಶೀಲನೆ ಅಗತ್ಯ. ಪಕ್ಷಾಂತರವೇ ಶಾಸಕರ ಉದ್ದೇಶವಾಗಿದೆ ಎಂದು ಮುಖ್ಯ ಮಂತ್ರಿ ಪರ  ವಕೀಲ ರಾಜೀವ್ ಧವನ್  ಸುಪ್ರಿಂ ಕೋರ್ಟ್ ನಲ್ಲಿ ವಾದ   ಮಂಡಿಸಿದರು.

ರಾಜೀವ್ ಧವನ್ ಶಾಸಕರು ಶಾಸಕರ ಸಾಮೂಹಿಕ ರಾಜೀನಾಮೆ ಪ್ರಜಾಪ್ರಭುತ್ವದ ಬುಡವನ್ನು ಅಲುಗಾಡಿಸುತ್ತಿದೆ. ಎಂದರು.  

ಸಂವಿಧಾನಿಕವಾಗಿ ಮನವರಿಕೆಯಾದರೆ ಮಾತ್ರ ರಾಜೀನಾಮೆ ಅಂಗೀಕಾರವೆಂದು ಸ್ಪೀಕರ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ . ಸ್ಪೀಕರ್ ಆದೇಶ ಕಾನೂನು ವ್ಯಾಪ್ತಿಯಲ್ಲಿ ಇಲ್ಲದಿದ್ದರೆ ಮಾತ್ರ ಪ್ರಶ್ನಿಸಬಹುದು ಎಂದು ಹೇಳಿದರು.

ಗುರುವಾರ ವಿಶ್ವಾಸ ಮತಯಾಚನೆ ನಡೆಯಲಿದೆ. ಅಲ್ಲಿ ಏನಾಗುತ್ತೋ  ಗೊತ್ತಿಲ್ಲ. ಅಲ್ಲಿ ಎಲ್ಲ ಶಾಸಕರು ಹಾಜರಿರಲಿ. ಶಾಸಕರಿಗೆ  3 ಸಾಲಿನ ವಿಪ್ ಜಾರಿಯಲ್ಲಿದೆ. ಇದೇ ಸಂದರ್ಭವನ್ನು ಬಳಸಿಕೊಂಡು  ಸರಕಾರವನ್ನು ಬೀಳಿಸಲು ಅತೃಪ್ತ ಶಾಸಕರು  ಯತ್ನ ನಡೆಸಿದ್ದಾರೆ ಎಂದು ರಾಜೀವ್ ಧವನ್ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News