ಯಾವುದೇ ತನಿಖೆಗೂ ಬದ್ಧ: ರೋಷನ್ ಬೇಗ್

Update: 2019-07-16 12:40 GMT

ಬೆಂಗಳೂರು, ಜು.16: ಐಎಂಎ ವಂಚನೆ ಪ್ರಕರಣ ಸಂಬಂಧ ಯಾವುದೇ ರೀತಿಯ ತನಿಖೆಗೂ ಬದ್ಧವಾಗಿದ್ದು, ಸಿಟ್ ತನಿಖಾ ಸಂಸ್ಥೆಗೆ ಸಹಕಾರ ನೀಡುವುದಾಗಿ ಶಾಸಕ ಆರ್.ರೋಷನ್ ಬೇಗ್ ಇಂದಿಲ್ಲಿ ಹೇಳಿದರು.

ಸಿಟ್ ವಿಚಾರಣೆ ಅಂತ್ಯಗೊಂಡ ಹಿನ್ನೆಲೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಸಿಟ್ ತನಿಖಾಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ತದನಂತರ, ಅವರೇ ನನ್ನನ್ನು ವಶಕ್ಕೆ ಪಡೆದು, ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿಸಿದರು.

ಸೋಮವಾರ ರಾತ್ರಿ ನಾನು ಪುಣೆಗೆ ತೆರಳಬೇಕಿತ್ತು. ಆದರೆ, ನಾನು ಎಲ್ಲೋ ಓಡಿ ಹೋಗುತ್ತೇನೆ ಎಂದು ಕೆಲವರು ನನ್ನ ವಿರುದ್ಧ ಪಿತೂರಿ ಮಾಡಿದರು. ಸದ್ಯ ಯಾರ ಮೇಲೂ ಆರೋಪ ಮಾಡಲು ಹೋಗುವುದಿಲ್ಲ ಎಂದ ಅವರು, ಇದೇ ತಿಂಗಳ 19ರಂದು ನಾನು ಮತ್ತೆ ವಿಚಾರಣೆಗೆ ಹಾಜರಾಗುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News