ಇಲ್ಲಿ ಅವಿವಾಹಿತ ಮಹಿಳೆಯರಿಗೆ ಮೊಬೈಲ್ ನಿಷೇಧ !

Update: 2019-07-17 03:59 GMT

ಪಾಲನಾಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಗುಜರಾತ್ ಸಮುದಾಯದ ಠಾಕೂರ್ ಸಮುದಾಯ, ಅವಿವಾಹಿತ ಮಹಿಳೆಯರು ಮೊಬೈಲ್ ಒಯ್ಯುವುದನ್ನು ನಿಷೇಧಿಸಿದೆ. ಅಂತೆಯೇ ಅಂತರ್ಜಾತಿ ವಿವಾಹವಾಗುವ ಯುವಕ- ಯುವತಿಯರ ಪೋಷಕರಿಗೆ ದಂಡ ವಿಧಿಸುವ ಕುರಿತೂ ಆದೇಶ ಹೊರಡಿಸಿದೆ.

ಜಿಲ್ಲೆಯ ದಂದಿವಾಡಾ ತಾಲೂಕಿನ 12 ಗ್ರಾಮಗಳ 14 ಮಂದಿ ಹಿರಿಯರು ಜುಲೈ 14ರಂದು ನಡೆಸಿದ ಸಭೆಯಲ್ಲಿ ಈ ಕುರಿತು ಅವಿರೋಧ ನಿರ್ಣಯ ಆಂಗೀಕರಿಸಿದೆ ಎಂದು ಸಮುದಾಯದ ಹಿರಿಯರೊಬ್ಬರು ತಿಳಿಸಿದ್ದಾರೆ.

ಯುವತಿಯರಿಗೆ ಮೊಬೈಲ್ ನಿಷೇಧಿಸಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಕಾಂಗ್ರೆಸ್ ಶಾಸಕ ಗನೀಬೆನ್ ಠಾಕೂರ್ ಹೇಳಿದ್ದಾರೆ. ಅವರು ತಂತ್ರಜ್ಞಾನದಿಂದ ದೂರ ಇದ್ದು, ಓದಿನ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಮರ್ಥಿಸಿಕೊಂಡಿದ್ದಾರೆ.

ಅವಿವಾಹಿತ ಮಹಿಳೆಯರಿಗೆ ಮೊಬೈಲ್ ನೀಡುವಂತಿಲ್ಲ: ಮೊಬೈಲ್‌ನೊಂದಿಗೆ ಅವರು ಸಿಕ್ಕಿಬಿದ್ದರೆ ಪೋಷಕರನ್ನು ಹೊಣೆ ಮಾಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News