ಸುಪ್ರೀಂಕೋರ್ಟ್ ಆದೇಶ: ಸ್ಪೀಕರ್ ಮುಂದಿನ ನಡೆ ಏನಿರಬಹುದು?

Update: 2019-07-17 06:35 GMT

ಬೆಂಗಳೂರು, ಜು.17: ಹದಿನೈದು ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ತೀರ್ಮಾನ ಕೈಗೊಳ್ಳಬೇಕು. ಅವರ ತೀರ್ಮಾನವೇ ಅಂತಿಮ. ಕಾಲ ಮಿತಿಯಲ್ಲಿ ಸ್ಪೀಕರ್ ತೀರ್ಪು ಪ್ರಕಟಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಬುಧವಾರ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿನ ನಡೆ ಏನಿರಬಹುದು ಎಂಬ ಪ್ರಶ್ನೆ ಉದ್ಬವಿಸಿದೆ.

ಸ್ಪೀಕರ್ ಮುಂದಿನ ನಡೆ

1.ರಾಜೀನಾಮೆ ನೀಡಿರುವ ಒಟ್ಟು 15 ಮಂದಿ ಶಾಸಕರಿಗೆ ಮತ್ತೆ ನೋಟೀಸ್ ನೀಡಿ ಕರೆದು ವಿಚಾರಣೆ ನಡೆಸಿ ರಾಜೀನಾಮೆ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಒಂದು ವೇಳೆ ರಾಜೀನಾಮೆ ತಿರಸ್ಕರಿಸಿದರೆ ಶಾಸಕರಿಗೆ ವಿಪ್ ಅನ್ವಯವಾಗಲಿದೆ.

2.ಈಗಾಗಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಅನರ್ಹತೆ ದೂರಿನ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹತೆ.

 3. ವಿಶ್ವಾಸಮತದ ಹಿನ್ನಲೆಯಲ್ಲಿ ಎರಡು ಪಕ್ಷಗಳು ವಿಪ್ ಜಾರಿ ಮಾಡಿದ್ದು ಉಲ್ಲಂಘನೆ ಆಧರಿಸಿ ಶಾಸಕರ ಅನರ್ಹತೆ.

4. ರಾಜೀನಾಮೆ ನೀಡಿರುವ ಎಲ್ಲ ಶಾಸಕರ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಸೇರಿದಂತೆ ಸಾರ್ವಜನಿಕರ ದೂರುಗಳಿದ್ದು...ಈ ಬಗ್ಗೆ ವಿಚಾರಣೆ ನಡೆಸಿ ಶಾಸಕರಿಂದ ಸ್ಪಷ್ಟಣೆ ಕೋರುವುದು..ಇಲ್ಲವೇ ಎಲ್ಲರ ರಾಜೀನಾಮೆ ಅಂಗೀಕಾರ

ಸಾಧ್ಯತೆ

ಸಂವಿಧಾನ ಮತ್ತು ನೈತಿಕತೆ ಆಧರಿಸಿ ಶಾಸಕರು ರಾಜೀನಾಮೆ ನೀಡುವುದು ಸರಿಯಲ್ಲ ಎಂದೂ ಹೇಳಲೂಬಹುದು.

 ಶಾಸಕರು ಆಸೆ ಆಮಿಷಗಳಿಗೆ ಬಲಿಯಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ರಾಜೀನಾಮೆ ನಿರಾಕರಿಸಲೂಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News