ರಾಜ್ಯಪಾಲರ ನಿರ್ದೇಶನ ಪಾಲನೆಯಾಗಬೇಕಾ?: ಸ್ಪೀಕರನ್ನು ಕೇಳಿದ ಕುಮಾರಸ್ವಾಮಿ

Update: 2019-07-19 09:56 GMT

  ಬೆಂಗಳೂರು, ಜು.19: ರಾಜ್ಯಪಾಲರನ್ನು ಟೀಕೆ ಮಾಡುವುದಿಲ್ಲ. ನಾನು ಈಗಾಗಲೇ ವಿಶ್ವಾಸಮತ ಪ್ರಸ್ತಾವ ಮಾಡಿದ್ದೇನೆ. ರಾಜ್ಯಪಾಲರು ಇಂದು ಮಧ್ಯಾಹ್ನ 1:30ಕ್ಕೆ ವಿಶ್ವಾಸ ಮತ ಯಾಚನೆಗೆ ನಿರ್ದೇಶಿಸಿದ್ದಾರೆ. ಅವರ ನಿರ್ದೇಶನ ಪಾಲನೆ ಆಗಬೇಕಾ? ನೀವೇ ಹೇಳಬೇಕು ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಸ್ಪೀಕರನ್ನು ಕೇಳಿದರು.

ಒಂದೆರಡು ಗಂಟೆಯಲ್ಲಿ ಮುಗಿಸಲಾರದ ಪ್ರಕ್ರಿಯೆ ಇದು. ಕೆಲ ಶಾಸಕರು ನಿಮ್ಮ ಮೇಲೆ ನಂಬಿಕೆ ಇಲ್ಲದೆ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದ್ದಾರೆ.

ರಾಜ್ಯಪಾಲರ ಹಸ್ತಕ್ಷೇಪದ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿ ಮುಖ್ಯಮಂತ್ರಿ ಓದಿ ಹೇಳಿದರು. ಇದಕ್ಕೆ ಸಚಿವ ಕೃಷ್ಣ ಭೈರೇಗೌಡ ಸಮರ್ಥನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News